ಇಂದಿನ ರಾಶಿ ಫಲ: ಕನ್ಯಾ ರಾಶಿಗೆ ಶುಭ ಸುದ್ದಿ, ತುಲಾ ರಾಶಿಗೆ ಧನ ಲಾಭ!? 12 ರಾಶಿಗಳ ಇವತ್ತಿನ ದಿನಭವಿಷ್ಯ!

Panchanga and Rasiphala ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತು ಮಾಘ ಮಾಸದ ಇಂದು ಶನಿವಾರ, ಶುಕ್ಲ ಪಕ್ಷದ ತ್ರಯೋದಶಿ ತಿಥಿಯು ಬೆಳಿಗ್ಗೆ 7.48 ರವರೆಗೆ ಇರಲಿದ್ದು, ಆ ಬಳಿಕ ಚತುರ್ದಶಿ ತಿಥಿ ಆರಂಭವಾಗಿ ಮಾರನೇ ದಿನ ಬೆಳಿಗ್ಗೆ 5.47 ರವರೆಗೆ ಇರುತ್ತದೆ. ಪುನರ್ವಸು ನಕ್ಷತ್ರ ರಾತ್ರಿ 1.42 ರವರೆಗೆ ಇದ್ದು, ನಂತರ ಪುಷ್ಯಮಿ ನಕ್ಷತ್ರ ಪ್ರವೇಶಿಸಲಿದೆ ಅಮೃತ ಘಳಿಗೆ ರಾತ್ರಿ 11.30 ರಿಂದ ಆರಂಭವಾಗಿ 1.02 ರವರೆಗೆ ಇರುತ್ತವೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ. 

ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ

ಇವತ್ತಿನ ರಾಶಿಭವಿಷ್ಯ/Panchanga and Rasiphala

ಮೇಷ | ಕುಟುಂಬದಲ್ಲಿ ಉತ್ತಮ ಪ್ರೋತ್ಸಾಹ, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನಸ್ತಾಪ ದೂರವಾಗಲಿದ್ದು, ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ ಮತ್ತು ಉದ್ಯೋಗಿಗಳಿಗೆ ಪದೋನ್ನತಿ. 

ವೃಷಭ | ಪ್ರಮುಖ ಕೆಲಸ ಪೂರ್ತಿಯಾಗಲಿದೆ,ಕಷ್ಟಪಟ್ಟರೂ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ ಎಂದುಕೊಳ್ಳಬೇಡಿ. ಸಾಲಕ್ಕಾಗಿ ಪ್ರಯತ್ನ, ಆಪ್ತರೊಂದಿಗೆ ಬೇಸರ. ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ ಕಾಡಬಹುದು. 

ಮಿಥುನ |  ಗೌರವ ಹೆಚ್ಚಲಿದ್ದು, ಅನಿರೀಕ್ಷಿತ ಮಾಹಿತಿಯೊಂದು ಕಿವಿಗೆ ಬೀಳಲಿದೆ. ಕೈಗೊಂಡ ಕೆಲಸಗಳಲ್ಲಿ ಜಯ, ಆಸ್ತಿ ಸಂಬಂಧಿತ ಒಪ್ಪಂದ. ಪುಣ್ಯಕ್ಷೇತ್ರಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಉತ್ಸಾಹ.

ಕರ್ಕಾಟಕ | ಅಂದುಕೊಂಡ ಕೆಲಸಗಳಲ್ಲಿ ವಿಳಂಬ, ಹಣಕಾಸಿನ ಮುಗ್ಗಟ್ಟು. ದೂರದ ಊರುಗಳಿಗೆ ಪ್ರಯಾಣ,  ಸಂಕಷ್ಟಗಳು ಎದುರಾಗುವ ಸಾಧ್ಯತೆ. ದೈವಿಕ ಚಿಂತನೆ, ವ್ಯಾಪಾರದಲ್ಲಿ ಸಾಮಾನ್ಯದಿನ ಮತ್ತು ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ. 

ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck
ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalala in Kannada

ಸಿಂಹ |  ದೂರದ ಊರುಗಳಿಂದ ಶುಭ ಸುದ್ದಿ , ಆರ್ಥಿಕವಾಗಿ ಅಭಿವೃದ್ಧಿ. ಪ್ರಮುಖ ನಿರ್ಧಾರ, ಕೆಲಸಗಳಲ್ಲಿ ಇದ್ದ ಅಡೆತಡೆ ನಿವಾರಣೆಯಾಗಲಿವೆ. ವ್ಯಾಪಾರದಲ್ಲಿ ಏಳಿಗೆ, ಉದ್ಯೋಗಿಗಳಿಗೆ ಸಂತೋಷದ ಸುದ್ದಿ. 

ಕನ್ಯಾ | ಸಂಬಂಧಿಕರೊಂದಿಗೆ ಇದ್ದ ಕಲಹ ಸುಖಾಂತ್ಯ ಕಾಣಲಿವೆ. ಆಪ್ತರು ಮತ್ತು ಹಿತೈಷಿಗಳಿಂದ ಆಹ್ವಾನ ಬರಲಿದ್ದು, ಆಸ್ತಿ ಲಾಭವಾಗುವ ಯೋಗವಿದೆ. ಒಂದು ಸುದ್ದಿ ಮನಸ್ಸಿಗೆ ನೆಮ್ಮದಿ ನೀಡಲಿದ್ದು,  ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಸಾಧಿಸುವರು.

ತುಲಾ |  ಹಣಕಾಸಿನ ತೊಂದರೆ ಬಾಧಿಸಲಿದ್ದು, ಸಾಲಕ್ಕಾಗಿ ಪ್ರಯತ್ನಿಸಬೇಕಾದೀತು. ಆರೋಗ್ಯದಲ್ಲಿ ವ್ಯತ್ಯಾಸ. ದೇವಾಲಯಗಳಿಗೆ ಭೇಟಿ, ಆದರೆ ಕೆಲಸ ಮುಂದೆ ಸಾಗದೆ ಸ್ಥಗಿತಗೊಳ್ಳಬಹುದು. ವ್ಯಾಪಾರ ಸಾಧಾರಣವಾಗಿರಲಿದ್ದು, ಉದ್ಯೋಗಿಗಳಿಗೆ ಕೆಲಸದ ಒತ್ತಡ. 

ವೃಶ್ಚಿಕ |  ಸಾಲದ ಪ್ರಯತ್ನ, ಪ್ರಯಾಣಗಳು ಮುಂದೂಡಲ್ಪಡಲಿವೆ. ವಿಪರೀತ ಶ್ರಮ, ಕೆಲಸಗಳಲ್ಲಿ ಅಡೆತಡೆ. ಜವಾಬ್ದಾರಿ ಹೆಚ್ಚಾಗಲಿದೆ. ದೈವ ದರ್ಶನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬದಲಾವಣೆ ಖಚಿತವಾಗಿ ಆಗಲಿವೆ. 

ಧನು | ವ್ಯವಹಾರಗಳಲ್ಲಿ ಜಯ. ಶುಭ ಸುದ್ದಿ ಬರಲಿದ್ದು, ಅನಿರೀಕ್ಷಿತವಾಗಿ ಧನಲಾಭ. ಹಳೆಯ ಬಾಕಿ ವಸೂಲಾಗಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಇದ್ದ ಅಡೆತಡೆ ನಿವಾರಣೆಯಾಗಲಿವೆ.

ಮಕರ |  ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದು, ಹಳೆಯ ಸ್ನೇಹಿತರ ಭೇಟಿಯಾಗುವರು. ವ್ಯಾಪಾರ ಉತ್ಸಾಹದಿಂದ ಸಾಗಲಿದ್ದು, ಉದ್ಯೋಗಿಗಳಿಗೆ ವಾತಾವರಣ ಅನುಕೂಲಕರವಾಗಿರಲಿದೆ. 

ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck
ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalala in Kannada

ಕುಂಭ |  ಕುಟುಂಬದಲ್ಲಿ ಕಿರಿಕಿರಿ, ದೂರ ಪ್ರಯಾಣ. ಅನಾರೋಗ್ಯ , ವ್ಯಾಪಾರ ಮಂದಗತಿಯಲ್ಲಿ ಸಾಗಲಿದ್ದು, ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಲಿದೆ. 

ಮೀನ |  ಕೈಗೊಂಡ ಕೆಲಸಗಳಲ್ಲಿ ಅಡೆತಡೆ ಎದುರಿಸಬೇಕಾಗಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ದೂರ ಪ್ರಯಾಣದ ಸಾಧ್ಯತೆ , ಅನಾರೋಗ್ಯದ ಮುನ್ಸೂಚನೆ. ಮನೆಯಲ್ಲಿ ಹಾಗೂ ಹೊರಗಡೆ ಸಮಸ್ಯೆ ಕಾಡಲಿದ್ದು, ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಸಮಾಧಾನ ಮೂಡುವ ಸಾಧ್ಯತೆಗಳಿವೆ.

ಶಿವಮೊಗ್ಗ, ಸಾಗರ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ರೇಟು! ವಾರದಲ್ಲಿಯೇ ಬದಲಾಯ್ತು ಅಡಿಕೆ ದರ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರDaily Horoscope 31 January 2026: Panchanga and Rasiphalala in Kannada
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು