28 MSC ವಿದ್ಯಾರ್ಥಿಗಳಿಗೆ ಚಿನ್ನದ ಪದಕ 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025

ಶಿವಮೊಗ್ಗ | ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ  ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಇಂದು ವಿಶ್ವವಿದ್ಯಾಲಯದ ಮುಖ್ಯ ಆವರಣ ಇರುವಕ್ಕಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯಪಾಲರು ಹಾಗು ವಿವಿ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. 

ಘಟಿಕೋತ್ಸವದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ 793 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ 176 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆದುಕೊಂಡರು. 

28 ಎಂ.ಎಸ್ಸಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು, ಅವರಿಗೆ ಒಟ್ಟು 33 ಚಿನ್ನದ ಪದಕಗಳನ್ನು ನೀಡಲಾಯಿತು. 10 ಪಿ.ಹೆಚ್.ಡಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು, ಅವರಿಗೆ ಒಟ್ಟು 12 ಚಿನ್ನದ ಪದಕಗಳನ್ನು ನೀಡಲಾಯಿತು.

ಪದವಿ ಚಿನ್ನದ ಪದಕ ವಿಜೇತರು

ಸಂಜೀತಾ ಎನ್ ಎಸ್ 4 ಪದಕ. ಪ್ರತೀಕ್ಷಾ ಎಲ್ ನಾಯ್ಕ 2 ಚಿನ್ನದ ಪದಕ. ಮೋಹನ್ ಪ್ರಸಾದ್ ಜಿ 1, ಚಂದನ ಆರ್ 1, ಅರವಿಂದ ಹೆಚ್ ಆರ್ 1, ಯಶಸ್ವಿನಿ ಎಂ.ಬಿ 1, ಸುಪ್ರಿತ ಎಂ.ಎಂ. 1, ಅಭಿಜ್ಞಾ ನಾಯಕ್ 1 ಒಟ್ಟು 25 ಚಿನ್ನದ ಪದಕವನ್ನು ಪದವಿ ವಿದ್ಯಾರ್ಥಿಗಳು ಪಡೆದರು.

ಸ್ನಾತಕ ಪದವಿ ಚಿನ್ನದ ಪದಕ ವಿಜೇತರು

 ಲಹರಿ 2 ಸಚಿನ್ ಎಲ್ ಎಂ, ಲೇಖನ ತಲಾ 2 ಮತ್ತು ಅಭಿಷೇಕ್ ಜೆ.ಕೆ, ಕಮಲಶ್ರೀ ಎಸ್ ಡಿ , ಚಂದನ ಎಸ್, ನಂದಿತಾ ಸಿನ್ಹಾ, ಮಂಜುಶ್ರೀ ಬಿ ಯು, ಅಲೇಕ್ಯ ಬಿ.ಎಂ, ಅನಿಲ್.ಹೆಚ್.ಎಂ., ಜ್ಯೋತಿ ಈ ತೊಂಡಿ, ಸಿಂಚನ, ಮಾಧರ್ಯ ಗೌಡ, ಸಲ್ಮಾ, ಸ್ವಾತಿ ಬಿ ತಲಾ 1 ಪದಕ ಒಟ್ಟು 18 ಚಿನ್ನದ ಪದಕ ಪಡೆದು ಕೊಂಡರು.‌

ಪಿಹೆಚ್ ಡಿ ಚಿನ್ನದ ಪದಕ‌ ವಿಜೇತರು:

ದರ್ಶನ್ ಆರ್ 2 ವಿಶಾಲ ರೆಡ್ಡಿ, ಸುಪ್ರಿಯ ಕುಮಾರಸ್ವಾಮಿ ಸಾಲಿಮಠ, ರವಿಚಂದ್ರ, ರೇಷ್ಮಾ ಕೆ ತಲಾ 1  ಪದಕ ಒಟ್ಟು 6ಚಿನ್ನದ ಪದಕ‌ ಪಡೆದರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಥಾವರ್ ಚಂದ್ ಗೆಹ್ಲೋಟ್ ನೀಡಿದರು.

ಅಡುಗೆ ಭಟ್ಟರ ಪುತ್ರಿಗೆ 4 ಚಿನ್ನದ ಪದಕ

ಶಿವಮೊಗ್ಗ ರವೀಂದ್ರನಗರದ ಗಣಪತಿ ದೇವಸ್ಥಾನದ ಅಡುಗೆ ಭಟ್ಟ ಸುರೇಶ್ ಹಾಗೂ ಸುಧಾ ದಂಪತಿ ಪುತ್ರಿ ಎನ್.ಎಸ್.ಸಂಜೀತಾ ಅವರು 2022-23ನೇ ಸಾಲಿನ ನಾಲ್ಕು ಪದಕಕ್ಕೆ ಮುತ್ತಿಟ್ಟರು. ಕಾಶಿಪುರದ ಸಂಜೀತಾ ಅವರು ಬೆಂಗಳೂರಿನ ಜಿಕೆವಿಕೆಯ ಚಿಂತಾಮಣಿ ಕ್ಯಾಂಪಸ್ ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಮುಂದೆ ಪಿಎಚ್ ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ. 

 

Malenadu Today

ಕೃಷಿಕರ ಮಗಳಿಗೆ ಮೂರು ಚಿನ್ನದ ಪದಕ

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡರಗೆರೆಯ ಜಿ.ಎಸ್.ಪೂರ್ಣಿಮಾ 2022-23ನೇ ಸಾಲಿನಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಜಿ.ಪಿ.ಹನುಮಂತ-ಎಲ್‌.ಆರ್.ರಾಜೇಶ್ವರಿ ದಂಪತಿ ಪುತ್ರಿಯಾಗಿದ್ದು ಜೆನಿಟಿಕ್ ಆ್ಯಂಡ್ ಪ್ಲ್ಯಾನ್ ಬೀಡಿಂಗ್ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಸಂಶೋಧನೆಯಲ್ಲಿ ಮುಂದುವರಿಯುವ ಇಂಗಿತವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಒಂದು ತಿಂಗಳು ಸಂಶೋಧನೆಗಾಗಿ ಬ್ಯಾಂಕಾಕ್ ಗೂ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.

 

Malenadu Today

ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪರಿಗೆ ಒಂದೇ ದಿನ 2 ಡಾಕ್ಟರೇಟ್‌

ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ  ಒಂದೇ ದಿನ 2 ಡಾಕ್ಟರೇಟ್ ಗಳನ್ನು ಪ್ರದಾನ ಮಾಡಲಾಯಿತು. ಬೆಳಿಗ್ಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಒಂದು ಡಾಕ್ಟರೇಟ್ ಅನ್ನು ಪಡೆದರೆ ಇನ್ನೊಂದು ಡಾಕ್ಟರೇಟ್ ಅನ್ನು ಮಧ್ಯಾಹ್ನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ  ವಿಶ್ವ ವಿ ನಡೆದ 9ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ವಿಶೇಷ ವೆಂದರೆ ಈ 2 ಡಾಕ್ಟರೇಟ್ ಅನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಧಾನ ಮಾಡಿದರು.

 

Malenadu Today


SUMMARY | The 9th convocation ceremony of Keladi Shivappanayaka University of Agricultural and Horticultural Sciences was held today at the university’s main campus Iruvakki

 

KEYWORDS |  convocation ceremony,  university, Agriculture,

Leave a Comment