24 ರಂದು ಪುಷ್ಪ 2 ಸಿನಿಮಾದ  ಕಿಸಿಕ್ ಐಟಂ  ಸಾಂಗ್ ರಿಲೀಸ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 23, 2024

ಅಲ್ಲೂ ಅರ್ಜುನ್ ನಟನೆಯ ಬಹು ನಿರೀಕ್ಷಿತ ಪುಷ್ಪ 2 ಸಿನಿಮಾ ಡಿಸೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಚಿತ್ರತಂಡ ಈ ಹಿಂದಷ್ಟೆ  ಚಿತ್ರದ  2 ಹಾಡುಗಳನ್ನು ರಿಲೀಸ್ ಮಾಡಿತ್ತು. ಆ ಹಾಡುಗಳು ಸಖತ್ ವೈರಲ್ ಅಗಿ ಹಿಟ್ ಕೂಡಾ ಆಗಿತ್ತು. ಇದೀಗ ಪುಷ್ಪ 2 ಚಿತ್ರ ತಂಡ ಕಿಸಿಕ್ ಎಂಬ ಐಟಂ ಸಾಂಗ್ ಅನ್ನು ನವಂಬರ್ 24 ಸಂಜೆ 7:04 ನಿಮಿಷಕ್ಕೆ ರಿಲೀಸ್ ಮಾಡ್ತಾ ಇದೆ.

 

ಕಿಸಿಕ್ ಹಾಡಿಗೆ ಹೆಜ್ಜೆ ಹಾಕಲಿರುವ ಕನ್ನಡತಿ ಶ್ರೀ ಲೀಲಾ

 

ಈ ಹಿಂದೆ ಪುಷ್ಪ ಚಿತ್ರದಲ್ಲಿಯೂ ಸಹ ಊ ಅಂಟವಾ ಮಾವ ಊಹು ಅಂಟಾವ ಮಾವ ಎಂಬ ಐಟಂ ಸಾಂಗ್ ಇತ್ತು. ಆ ಐಟಂ ಸಾಂಗ್ ಗೆ ತೆಲುಗಿನ ಸ್ಟಾರ್ ನಟಿ ಸಮಂತಾ ಸಖತ್ ಅಗಿ  ಸ್ಟೆಪ್ ಹಾಕಿದ್ರು.  ಹಾಡು ಸಖತ್ ಹಿಟ್ ಆಗಿತ್ತು. ಅಷ್ಟೇ ಅಲ್ಲದೆ ಆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಈಗ ಪುಷ್ಪ 2 ಚಿತ್ರದಲ್ಲಿ ಕಿಸಿಕ್ ಎಂಬ ಐಟಂ ಸಾಂಗ್ ಒಂದಿದ್ದು, ಅದಕ್ಕೆ ಕನ್ನಡತಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಚಿತ್ರತಂಡ ಈಗಾಗಲೆ ಆ ಸಾಂಗ್ ನ ತುಣುಕೊಂಡನ್ನು ಬಿಟ್ಟಿದ್ದು,  ಈ ಹಾಡಿಗೆ ಚಂದ್ರ ಬೋಸ್ ಸಾಹಿತ್ಯ ಬರೆದಿದ್ದಾರೆ.  ಈ ಹಾಡನ್ನು ಲೋತಿಕ ಮತ್ತು ಸಬ್ಲಾಷಿಣಿ ಹಾಡಿದ್ದಾರೆ. ಇದರ ಪೂರ್ತಿ ಹಾಡು  ನವಂಬರ್ 24 ಸಂಜೆ 7:04 ನಿಮಿಷಕ್ಕೆ ರಿಲೀಸ್ ಆಗ್ತಾ ಇದೇ. ಈ ಹಾಡು ಕೂಡ ಊ ಅಂಟಾವ ಮಾವ ಊಹೂ ಅಂಟಾವಾ ಸಾಂಗ್ ನಂತೆ ಪ್ರೇಕ್ಷಕರನ್ನು ರಂಜಿಸಲಿದ್ಯ ಎಂದು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.

 

SUMMARY|  Pushpa 2 team will be releasing the item song ‘Kisik’ on November 24 at 7:04 pm

KEYWORDS|  Pushpa 2,  item song, ‘Kisik, allu arjun,

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು