SHIVAMOGGA | MALENADUTODAY NEWS | ಮಲೆನಾಡು ಟುಡೆ Jan 21, 2025
2028 ರ ವಿಧಾನಸಭಾ ಚುನಾವಣೆ ಹೊತ್ತಿಗೆ ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿ ಖತಂಗೊಳ್ಳುತ್ತಾ? ಆ ಸಂದರ್ಭದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಾ? ಹೌದು ಎಂಬಂತೆ ಮಾತನಾಡಿದ್ದಾರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯ್ಕ್
ತಮ್ಮ ಜನ್ಮದಿನದ ಅಂಗವಾಗಿ ಹೊಳೆಹೊನ್ನೂರು ಭಗೀರಥ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಅವರ ಹುಟ್ಟುಹಬ್ಬ ಆಚರಣೆಯ ವೇಳೆ, ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡು ಮಾತನಾಡಿರುವ ಅವರು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ದೆಮಾಡುತ್ತದೆ ಎಂದಿದ್ದಾರೆ. ಅವರ ಮಾತು ಕುತೂಹಲ ಮೂಡಿಸಿದೆ.
ಯಾವುದಾದರನ್ನೂ ಕಳೆದುಕೊಂಡ ಮೇಲೆ ಅದರ ಬೆಲೆ ತಿಳಿಯುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗೆಯೇ ನಾವು ಕ್ಷೇತ್ರದಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ನಮ್ಮ ಕಾರ್ಯಕರ್ತರು ಅನುಭವಿಸುತ್ತಿರುವ ನೋವು ನನಗೆ ಅರಿವಿದೆ. ಕಳೆದು ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದೇನೆ ಎಂದರು. ಹೊಳೆಹೊನ್ನುರು ಪಟ್ಟಣ ಪಂಚಾಯಿತಿ ಯಾಗಿ ಮೇಲ್ದರ್ಜೇರಿಸುವ ಮೂಲಕ ಪಟ್ಟಣಕ್ಕೆ ಒಂದು ಹೊಸ ರೂಪ ನೀಡುವ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ
SUMMARY | Will the JDS alliance with the BJP end by the 2028 assembly elections?
KEY WORDS | Will the JDS alliance with the BJP end by the 2028 assembly elections , 2028 assembly elections?