2.50 ಲಕ್ಷದ ಮಾಂಗಲ್ಯ ಸರ ಖರೀದಿ,  ಮನೆಗೆ ಹೋಗಿ ನೋಡಿದಾಗ ನಾಪತ್ತೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 21, 2025

ಶಿವಮೊಗ್ಗ | ಮಹಿಳೆಯೊಬ್ಬರು ಬಂಗಾರದ ಅಂಗಡಿಯಲ್ಲಿ ಬಂಗಾರ ಖರೀದಿಸಿ ಸಿಟಿ ಬಸ್ ನಲ್ಲಿ ಮನೆಗೆ ಹೋಗಿ ನೋಡಿದಾಗ ಮಹಿಳೆಗೆ ದೊಡ್ಡದೊಂದು ಆಘಾತ ಎದುರಾಗಿದೆ. ಅದೇನೆಂದರೆ. ಮಹಿಳೆ ಬ್ಯಾಗಿನಿಂದ ಕಳ್ಳರು ಲಕ್ಷಾಂತರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ಮಹಿಳೆ ವಿನೋಬಾ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.

ಏನಿದು ಘಟನೆ

ನಾಗರತ್ನಮ್ಮ ಎನ್ನುವವರು. ಹೊಸ ಮಾಂಗಲ್ಯ ಸರವನ್ನು ತೆಗೆದುಕೊಳ್ಳಲು ಗೋಪಿ ವೃತ್ತದಲ್ಲಿರುವ ಆಭರಣ ಜ್ಯೂವೆಲರ್ಸ್‌ ಅಂಗಡಿಗೆ ತೆರಳಿದ್ದರು. ಆ ಅಂಗಡಿಯಲ್ಲಿ 1.93 ಲಕ್ಷ ಮೌಲ್ಯದ 21 ಗ್ರಾಂ ತೂಕದ  ಮಾಂಗಲ್ಯ ಸರ ಹಾಗೂ ಅದಕ್ಕೆ 7 ಗ್ರಾಂ ತೂಕದ ತಾಳಿ, ಲಕ್ಷ್ಮಿ ಕಾಸು, ಗುಂಡುಗಳನ್ನು ಜ್ಯೂವೆಲರಿ ಅಂಗಡಿಯಲ್ಲೇ ಕೊಂಡು ಕೊಂಡಿದ್ದರು. ಒಟ್ಟು 2.50 ಲಕ್ಷದ ಆಭರಣವನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಸಿಟಿ ಬಸ್‌ ಹತ್ತಿ  ಅಲ್ಲಿಂದ ಗಾಂಧಿ ಬಜಾರ್‌ಗೆ ಹೋಗಿದ್ದರು. ನಂತರ ಎಸ್‌.ಎನ್‌.ಸರ್ಕಲ್‌ನಲ್ಲಿ ಸಿಟಿ ಬಸ್‌ ಹತ್ತಿದ್ದರು. ಈ ಬಸ್ಸು ಬಸ್‌ ನಿಲ್ದಾಣದವರೆಗೆ ಹೋಗಿ ತಿರುಗಿ ಮಾರುಕಟ್ಟೆಗೆ ಬಂದಿತ್ತು. ಈ ವೇಳೆಯಲ್ಲೆ ಚಿನ್ನದ ಸರ  ಕಳುವಾಗಿರುವ ಕುರಿತು ಮಹಿಳೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

SUMMARY | The thieves stole gold worth lakhs of rupees from the woman’s bag.

KEYWORDS |  thieves, stole gold,  woman,  shivamogga,

Share This Article