SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 9, 2024
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಕಾರು ಬೈಕ್ ಸೇರಿದಂತೆ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಎಲೆಕ್ಟ್ರಿಕ್ ಸ್ಕೂಟಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಎಲೆಕ್ಟ್ರಿಕ್ಸ್ ಇವಿ ಎಂಬ ಹೊಸ ಸ್ಟಾರ್ಟ್ಅಪ್ ಕಂಪನಿಯು ಕಡಿಮೆ ಬಜೆಟ್ನಲ್ಲಿ ಹೆಚ್ಚು ಮೈಲೇಜ್ ನೀಡುವ ಎನ್ಡ್ಯೂರೊ ಎಂಬ ಹೆಸರಿನ ಸ್ಕೂಟಿಯನ್ನು ಬಿಡುಗಡೆ ಗೊಳಿಸಿದೆ.
ಹೇಗಿರಲಿದೆ ಎನ್ಡ್ಯೂರೊ ಬುಕಿಂಗ್ ಓಪನ್ ಯಾವಾಗ ಬೈಕ್ ನಲ್ಲಿರುವ ಫೀಚರ್ಸ್ಗಳೇನು
ಈ ಎನ್ಡ್ಯೂರೊ ಸ್ಕೂಟಿಗಳನ್ನು ಎಲೆಕ್ಟ್ರಿಕ್ಸ್ ಇವಿ ಎರಡು ವೇರಿಯಂಟ್ ಗಳಲ್ಲಿ ಬಿಡುಗಡೆಗೊಳಿಸುತ್ತಿವೆ. ಎನ್ಡ್ಯೂರೊ 2.0 ಹಾಗೂ ಎನ್ಡ್ಯೂರೊ 3.0 ಇದರ ಬುಕ್ಕಿಂಗ್ ಡಿಸೆಂಬರ್ 15 ರ ನಂತರ ಓಪನ್ ಆಗಲಿದೆ. ಜನವರಿ 2025 ಕ್ಕೆ ಇದು ಗ್ರಾಹಕರ ಕೈ ಸೇರಲಿದೆ.
ಇದರಲ್ಲಿ USB ಚಾರ್ಜಿಂಗ್, ಮೊಬೈಲ್ ಹೋಲ್ಡರ್, SOS ರಿವರ್ಸ್ ಮೋಡ್, ಕಾಂಬಿ ಬ್ರೇಕಿಂಗ್ ಸಿಸ್ಟಮ್, ಬ್ಲೂಟುತ್ ಕನೆಕ್ಟಿವಿಟಿ, 42 ಲೀಟರ್ಗಳ ಸಾಮರ್ಥ್ಯ ಹೊಂಡಿರುವ ಡಿಕ್ಕಿ ಸೇರಿದಂತೆ ಅನೇಕ ಫೀಚರ್ಸ್ ಗಳನ್ನು ನೀಡಲಾಗಿದೆ.
ಈ ಸ್ಕೂಟಿಯ ಬೆಲೆ ಹಾಗೂ ಮೈಲೇಜ್ ಎಷ್ಟು
ಎನ್ಡ್ಯೂರೊ ಇವಿ 2.3 kWh ಬ್ಯಾಟರಿ ಹಾಗೂ 3.0 kWh ಎಂಬ ಎರಡು ಬ್ಯಾಟರಿ ಆಯ್ಕೆಗಳನ್ನು ನೀಡುತ್ತಿದೆ. 2.3 kWh ಬ್ಯಾಟರಿಯಲ್ಲಿ ಈ ಸ್ಕೂಟಿ ಒಮ್ಮೆ ಚಾರ್ಜ್ ಮಾಡಿದರೆ 90 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ .ಹಾಗೆಯೇ 3.0 kWh ಬ್ಯಾಟರಿಯಲ್ಲಿ 117 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಇದು ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಅಗಲು 4 ರಿಂದ 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ.
ಹಾಗೆಯೇ ಇದರಲ್ಲಿ ಪ್ರತಿ ಗಂಟೆಗೆ ಗರಿಷ್ಟ 65 ಕಿಲೋಮೀಟರ್ ಸ್ಫೀಡ್ ನಲ್ಲಿ ಹೋಗಬಹುದು. ಎನ್ಡ್ಯೂರೊ ಇವಿ 2.3 kWh ಸ್ಕೂಟಿಯ ಎಕ್ಸ್-ಶೋರೂಮ್ ಬೆಲೆ 89,999 ರೂಪಾಯಿ ಆಗಿದ್ದು 3.0 kWh ಬ್ಯಾಟರಿ ಸಾಮರ್ಥ್ಯದ ಹೊಂದಿರುವ ಸ್ಕೂಟಿಗೆ 99999 ರೂಪಾಯಿ ನಿಗದಿಪಡಿಸಲಾಗಿದೆ. ಈ ಸ್ಕೂಟಿ ಕ್ವಾಂಟಮ್ ಬ್ಲ್ಯಾಕ್, ನೋವಾ ವೈಟ್, ಸೋಲಾರ್ ರೆಡ್, ಕಾಸ್ಮಿಕ್ ಬ್ಲೂ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಕಂಪನಿಯು 3 ವರ್ಷ ಸ್ಟ್ಯಾಂಡರ್ಡ್ ಬ್ಯಾಟರಿ ವಾರೆಂಟಿಯನ್ನು ನೀಡುತ್ತದೆ,
SUMMARY | A new start-up called Lectrix EV has launched a scooty named nduro that offers more mileage on a low budget.
KEYWORDS | Lectrix, EV, nduro, EV, vehicle,