SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 3, 2024
ಭಾರತದ ಸೂಪರ್ ಬೈಕ್‌ಗಳಲ್ಲಿ ಒಂದಾದ ಕೆಟಿಎಂ ಡ್ಯೂಕ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ನೀಡಿದೆ. ಅದೇನೆಂದರೆ ಕೆಟಿಎಂ ಡ್ಯೂಕ್ 250 ಬೈಕ್ ಮೇಲೆ ಬರೊಬ್ಬರಿ 20 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಈ ಆಫರ್ ಈ ಡಿಸೆಂಬರ್ 31 ರ ವರೆಗೆ ಇರಲಿದೆ. ಈ ಬೈಕ್ ಅಟ್ಲಾಂಟಿಕ್ ನೀಲಿ, ಎಲೆಕ್ಟ್ರಿಕ್ ಆರೆಂಜ್ ಮತ್ತು ಡಾರ್ಕ್ ಗಾಲ್ವನೊ ಹೆಸರಿನ ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಈ ಬೈಕ್ ಹಸ್ಕ್ವರ್ನಾ ವಿಟ್ಪಿಲೆನ್ 250, ಸುಜುಕಿ ಜಿಕ್ಸರ್ 250 (Suzuki Gixxer 250) ಮತ್ತು ಬಜಾಜ್ ಪಲ್ಸರ್ ಎನ್250 ಪೈಪೋಟಿ ನೀಡುತ್ತದೆ. ಸದ್ಯ ದೆಹಲಿಯ ಶೋರೂಂ ಗಳಲ್ಲಿ ಈ ಬೈಕ್‌ನ ಬೆಲೆ 2.25 ಲಕ್ಷ ರೂಪಾಯಿಗಳಿದ್ದು, ಆಯಾ ನಗರಗಳಿಗೆ ತಕ್ಕಂತೆ ದರ ಬದಲಾವಣೆ ಆಗಲಿದೆ. ಹೊಸವರ್ಷ ಆರಂಭಕ್ಕೂ ಮೊದಲು ನೀಡಿರುವ ಈ ಆಫರ್‌ನ ಬಗ್ಗೆ ಮಾಹಿತಿಯನ್ನು ಕೆಟಿಎಂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿದೆ.
ಈ ಬೈಕ್ ನಲ್ಲಿ ಕೆಲವು ಫ್ಯೂಚರ್ಸ್ ಗಳನ್ನು ಅಪ್ಡೇಟ್ ಮಾಡಲಾಗಿದೆ. ಅದರಲ್ಲಿ ಚಾರ್ಜಿಂಗ್ ಪೋರ್ಟರ್ , ಬ್ಲೂಟುತ್ ಮೂಲಕ ಸಾಂಗ್ ಕೇಳುವುದು ವಿಶಾಲವಾದ ಡಿಸ್ಪ್ಲೆ ಸೇರಿದಂತೆ ಇನ್ನೂ ಅನೇಕ ಪ್ಯೂಚರ್ ಗಳನ್ನು ಸೇರಿಸಲಾಗಿದೆ.
SUMMARY | KTM India slashed the prices of the 250 Duke discount of Rs 20,000.
KEYWORDS | KTM Duke 250, discount, superbikes, india,