SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 2, 2025
ಶಿವಮೊಗ್ಗ ತಾಲೂಕಿನ ಮತ್ತೂರು-ಹೊಸಹಳ್ಳಿ ಚೆಕ್ ಡ್ಯಾಂ ನಲ್ಲಿ ಈಜಲು ತೆರಳಿದ್ದಾಗ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ ನಗರದ ರಾಗಿ ಗುಡ್ಡದ 16 ವರ್ಷದ ರೆಹಮತ್ ಮೃತ ಬಾಲಕ ಎಂದು ತಿಳಿದುಬಂದಿದೆ. ರೆಹಮತ್ ಮಂಗಳವಾರ ಸಂಜೆ ಸ್ನೇಹಿತರೊಡನೆ ಹೊಸಹಳ್ಳಿ ಚೆಕ್ ಡ್ಯಾಂ ನಲ್ಲಿ ಈಜಲು ತೆರಳಿದ್ದ. ಆಗ ಡ್ಯಾಂ ನಲ್ಲಿ ನೀರು ಹೆಚ್ಚಿದ್ದ ಕಾರಣ ಬಾಲಕನಿಗೆ ಈಜಲು ಸಾಧ್ಯವಾಗಲಿಲ್ಲ. ಆದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ
ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
SUMMARY | A boy drowned while swimming in the Hosahalli check dam.
KEYWORDS | swimming, boy, died, Hosahalli ,check dam,