ಹೊಳೆ ಬಸ್‌ ಸ್ಟಾಪ್‌ ಬಳಿ, ಡಿವೈಡರ್‌ಗೆ ಶಿವಮೊಗ್ಗ-ಭದ್ರಾವತಿ ಬಸ್‌ ಡಿಕ್ಕಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024 

ಶಿವಮೊಗ್ಗ | ನಗರದ ಹೊಳೆಬಸ್‌ ಸ್ಟಾಪ್‌ ಬಳಿಯಲ್ಲಿ ಶಿವಮೊಗ್ಗ-ಭದ್ರಾವತಿ ಬಸ್‌ವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇಲ್ಲಿನ ಹೊಸಸೇತುವೆ ಮೇಲೆ ಬರುವ ಬಸ್‌ಗಳು ಮುಖ್ಯ ಬಸ್‌ ನಿಲ್ದಾಣಕ್ಕೆ ಹೋಗಲು ಎಡಕ್ಕೆ ಟರ್ನ್‌ ಆಗುತ್ತವೆ. ಹೀಗೆ ಟರ್ನ್‌ ಆಗುವ ಸಂದರ್ಭದಲ್ಲಿ ಡಿವೈಡರ್‌ಗೆ ಬಸ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ನ ಮುಂಭಾಗದ ಡೋರ್‌ ಪೂರ್ತಿ ಜಖಂಗೊಂಡಿದೆ. ಅದೃಷ್ಟಕ್ಕೆ ಬಸ್‌ನಲ್ಲಿದ್ದವರಿಗೆ ಏನೂ ಸಹ ಆಗಲಿಲ್ಲ. 

ಬೆಂಗಳೂರು ಬಿಎಂಟಿಸಿ ಮಾದರಿಯ ಬಸ್‌ ಇದಾಗಿದ್ದು ಸೆಂಟರ್‌ ಡೋರ್‌ನಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಅಲ್ಲಿಯೇ ಇಳಿದಿದ್ದಾರೆ. ಆ ಬಳಿಕ ಬಸ್‌ನ ಚಾಲಕ ಸ್ಥಳೀಯರ ಸಹಾಯದಿಂದ ಬಸ್‌ನ್ನ ರಿವರ್ಸ್‌ ತೆಗೆದುಕೊಂಡು ಡಿಪೋಗೆ ತೆರಳಿದ್ದಾನೆ. ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.  

SUMMARY | Shimoga Bhadravathi bus collided with a road divider near Hole bus stand in Shivamogga 

KEYWORDS |  Shimoga Bhadravathi bus, road divider,   Hole bus stop in Shivamogga 

Share This Article