SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 25, 2024
ಶಿವಮೊಗ್ಗ | ಹೊಂಗಿರಣ ತಂಡದಿಂದ ಕುವೆಂಪು ನಾಟಕೋತ್ಸವ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ಡಿ.27 ರಿಂದ 29 ರ ವರೆಗೆ ನಡೆಸಲಾಗುವುದು ಎಂದು ಹೊಂಗಿರಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಸಾಸ್ವೇಹಳ್ಳಿ ಸತೀಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು 3 ದಿನ ನಡೆಯುವ ಈ ಕಾರ್ಯಕ್ರಮ ಸಂಜೆ 6:30 ಕ್ಕೆ ಪ್ರಾರಂಭವಾಗುತ್ತದೆ. ಮೊದಲ ದಿನ ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಕ್ರಾಂತ ಪ್ರಾಚಾರ್ಯರಾದ ಪ್ರೋ ಪಂಚಾಕ್ಷರಿ ಎಸ್ ಮಾಡಲಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಂಗಿರಣ ತಂಡದ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಕರ್ ಹಿರೇಗೋಣಿಗೆರೆ, ವಹಿಸಲಿದ್ದಾರೆ ಎಂದರು.
ಮೊದಲ ದಿನ ರಾಮಾಯಣ ದರ್ಶನಂ ಕೃತಿಯ ಆಧಾರಿತ ರಾವಣ ದರ್ಶನಂ ಎಂಬ ನಾಟಕವನ್ನು ಹೊಂಗಿರಣ ಶಿವಮೊಗ್ಗ ತಂಡದಿಂದ ನಡೆಸಲಾಗುವುದು. ಹಾಗೆಯೇ 2 ನೇ ದಿನ ಅಂದರೆ 28 ರಂದು ಬೊಮ್ಮನ ಹಳ್ಳಿಯ ಕೊಂದರಿ ಜೋಗಿ ಎಂಬ ನಾಟಕವನ್ನು ವಾತ್ಸಲ್ಯ ಇಂಟರ್ ನ್ಯಾಷನಲ್ ಸ್ಕೂಲ್ ಹೊಸೂರು ಇವರು ಅಭಿನಯಿಸಲಿದ್ದಾರೆ. ಕೊನೆಯ ದಿನ 29 ರಂದು ನಡೆಯುವ ನನ್ನ ಗೋಪಾಲ ಎಂಬ ನಾಟಕವನ್ನು ಶಿವಮೊಗ್ಗದ ವಿವಿಧ ಶಾಲೆಯ ಮಕ್ಕಳು ಅಭಿನಯಿಸಿ ತೋರಿಸಲಿದ್ದಾರೆ ಎಂದರು. ಈ ನಾಟಕದ 3 ದಿನದ ಪ್ರವೇಶ ಶುಲ್ಕ 100 ರೂಪಾಯಿಗಳಾಗಿರುತ್ತದೆ. ಹಾಗೆಯೇ ಒಂದು ದಿನ ಮಾತ್ರ ಬಂದರೆ 50 ರೂಪಾಯಿಗಳನ್ನು ಚಾರ್ಜ್ ಮಾಡುತ್ತಿದ್ದೇವೆ ಎಂದರು.
SUMMARY | The Kuvempu Drama Festival programme will be held at Kuvempu Rangamandira from Dec. 27 to 29. Sasvehalli Satish said.
KEYWORDS | Kuvempu Drama Festival, Kuvempu Rangamandira, Sasvehalli Satish, shivamogga,
