ಹೇರ್‌ ಡ್ರೈಯರ್ ಸ್ಫೋಟ ಮಹಿಳೆಯ ಎರಡು ಕೈ ಬೆರಳುಗಳು ಛಿದ್ರ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024

ಬಾಗಲಕೋಟೆ | ಹೇರ್ ಡ್ರೈಯರ್‌  ಒಂದು ಸ್ಫೋಟಗೊಂಡು, ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರವಾಗಿರುವ ಘಟನೆ ಬಾಗಲಕೋಟೆಯಲ್ಲಿ ಇಳಕಲ್‌ ಪಟ್ಣಣದಲ್ಲಿ ನಡೆದಿದೆ. ಇಲ್ಲಿನ ನಿವಾಸಿ  ಶಶಿಕಲಾ ಎಂಬುವವರು ಹೇರ್‌ ಡ್ರೈಯರ್‌ ಅನ್ನು ಆನ್ಲೈನ್‌ ಅಲ್ಲಿ ಆರ್ಡರ್‌ ಮಾಡಿದ್ದರು. ಆದರೆ ಅವರು ಊರಿನಲ್ಲಿ ಇಲ್ಲದಿದ್ದರಿಂದ  ಅವರಿಗೆ ಬಂದಿದ್ದ ಪಾರ್ಸಲ್‌ ಅನ್ನು ಪಕ್ಕದ ಮನೆಯ  ಬಸಮ್ಮ ಎನ್ನುವವರು ತೆಗೆದುಕೊಂಡಿದ್ದಾರೆ. 

ಆ ಬಳಿಕ ಅದನ್ನು ಇನ್ನೇನು ಬಳಸ ಬೇಕು ಎಂದು ಸ್ಡಿಚ್‌ ಆನ್‌ ಮಾಡುವಾಗ ಹೇರ್‌ ಡ್ರೈಯರ್‌ ಸ್ಪೋಟಗೊಂಡಿದೆ ಎನ್ನಲಾಗಿದೆ, ಇದರ ಪರಿಣಾಮ ಮಹಿಳೆಯ ಎರಡು ಕೈಗಳು ತುಂಡಾಗಿದ್ದು, ಕೈಗಳ ಬೆರಳುಗಳು ಛಿದ್ರಗೊಂಡಿದೆ. ತಕ್ಷಣ ಅವರನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

SUMMARY |  hair dryer exploded, bagalakot,

KEY WORDS | hair dryer exploded, bagalakot,

 

Share This Article