ಹೆಲ್ಮೆಟ್‌ ಒಳಗಿದ್ದ ನಾಗರ ಹಾವು ಕಚ್ಚಿ ಬೈಕ್‌ ಸವಾರ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 30, 2024

ಬೈಕ್‌ ಸವಾರರೊಬ್ಬರು ತಾವು ಧರಿಸಿದ ಹೆಲ್ಮೆಟ್‌ ಒಳಗೆ ಅಡಗಿ ಕುಳಿತಿದ್ದ ನಾಗರ ಹಾವು ಕಚ್ಚಿ ಸಾವನ್ನಪಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಬೈಕ್‌ ಸವಾರರೊಬ್ಬರು ಬೈಕ್‌ನಲ್ಲಿ ಸವಾರಿ ಮಾಡುತ್ತಿರುವಾಗ ಒಮ್ಮೆಲೆ ಪ್ರಜ್ಙೆತಪ್ಪಿ ಬೈಕ್‌ ಮೇಲೆ ಬಿದ್ದಿದ್ದಾರೆ. ಆಗ ಸುತ್ತಮುತ್ತಲಿನ ಜನ ಅವರನ್ನು ಮೇಲೆತ್ತಿದ್ದಾಗ ಅವರ ಪ್ರಾಣ ಪಕ್ಷಿಹಾರಿ ಹೋಗಿದೆ. ಇದರಿಂದ ಗಾಬರಿಗೊಂಡ ಜನರು ಏನಾಗಿರಬಹುದು ಎಂದು ನೋಡಿದಾಗ ಹೆಲ್ಮೆಟ್‌ ಒಳಗೆ ಹಾವು ಇರುವುದು ತಿಳಿದುಬಂದಿದೆ. ತಕ್ಷಣ ಉರಗತಜ್ಞ ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.



SUMMARY | A video of a biker being bitten by a cobra hiding inside his helmet has gone viral on social media.

KEYWORDS | biker,  social media, viral video,

 

Share This Article