ಹೆಡೆ ಎತ್ತಿದ ಹಾವಿನ ಮಂಡೆಗೆ ಮುತ್ತಿಟ್ಟು ನಕ್ಕ ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 13, 2024

ಹಾವುಗಳೆಂದರೆ ಯಾರಿಗೆ ಭಯ ಇರಲ್ಲ ಹೇಳಿ. ಅಪ್ಪಿತಪ್ಪಿ ಹಗ್ಗ ತುಳಿದರೂ ಹಾವು ತುಳಿದಹಾಗೆ ಅನಿಸುವುದು ಇದೆ. ಆದರೆ ಇಲ್ಲೊಬ್ಬರು ವ್ಯಕ್ತಿ ಹೆಡೆ ಎತ್ತಿದ ಹಾವಿನ ಮಂಡೆಗೆ ಮುತ್ತುಕೊಟ್ಟು ಡ್ಯಾನ್ಸ್‌ ಮಾಡುತ್ತಿದ್ದಾರೆ. ಈ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

lucky-udaan4090 ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಸದ್ಯ ನ್ಯಾಶನಲ್‌ ಇಂಟ್ರಸ್ಟ್‌ ಆಗುತ್ತಿದೆ. ವಿಡಿಯೋದಲ್ಲಿರುವ ವ್ಯಕ್ತಿ ಅತ್ಯುತ್ತಮ ಡ್ಯಾನ್ಸರ್‌ ಆಗಿದ್ದು, ಮಹಿಳೆಯ ವೇಷದಲ್ಲಿ ಕುಣಿಯುತ್ತಾ ಹಾವಿನ ಹೆಡೆಗೆ ಮುತ್ತಿಟ್ಟು ತಮ್ಮ ನಾಲಿಗೆಯನ್ನ ಹಾವಿಗೆ ತಾಕಿಸುತ್ತಾರೆ. ಇದನ್ನ ನೋಡಿ ಬುಸುಗುಟ್ಟುವ ಹಾವನ್ನ ನೋಡುತ್ತಾ ನಗುತ್ತಾರೆ. 

ಇಷ್ಟೊಂದು ಡೇರ್‌ನೆಸ್‌ ತೋರಿದ ವಿಡಿಯೋ ಸಂಬಂಧ ಸಾಕಷ್ಟು ಕಾಮೆಂಟ್ಸ್‌ಗಳು ಬರುತ್ತಿದ್ದು ಇಂತಹ ದುಸ್ಸಾಹಸ ಮಾಡಬೇಡಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. 



SUMMARY| video of a man kissing a snake is going viral on Instagram

KEY WORDS |  video of a man kissing a snake, going viral on Instagram

Share This Article