ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವು ಮತ್ತೆ ವಿಸ್ತರಣೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024

ರಾಜ್ಯ ಸರ್ಕಾರ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು 2024 ಡಿಸೆಂಬರ್ 31 ರ ವರೆಗೆ  ವಿಸ್ತರಿಸಿದೆ.

ಇದುವರೆಗೂ ರಾಜ್ಯಸರ್ಕಾರ ನಂಬರ್ ಪ್ಲೇಟ್ ಅಳವಡಿಕೆಗೆ 4 ಬಾರಿ ಗಡುವನ್ನು ನೀಡಿತ್ತು. ಅಷ್ಟೇ ಅಲ್ಲದೆ  ಇತ್ತೀಚೆಗಷ್ಟೇ ಹೈಕೋರ್ಟ್ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ಡಿಸೆಂಬರ್ ನಾಲ್ಕರ ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿತ್ತು. 

ಆದರೆ ಇನ್ನೂ ರಾಜ್ಯದಲ್ಲಿ 2 ಕೋಟಿ ವಾಹನಗಳ ಪೈಕಿ 55 ಲಕ್ಷ ವಾಹನಗಳು ಮಾತ್ರ ಇದುವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿವೆ. ಆದ್ದರಿಂದ ಸರ್ಕಾರ ಮತ್ತೆ ಐದನೇ ಬಾರಿಗೆ ಡಿಸೆಂಬರ್ 31 ರ ವರೆಗೆ ಈ ಗಡುವನ್ನು ವಿಸ್ತರಣೆ ಮಾಡಿವೆ.

ಎಪ್ರಿಲ್ 1 2019 ರ ನಂತರ  ನೊಂದಣಿಯಾದ ವಾಹನ ಗಳಿಗೆ ಹೆಚ್ ಆರ್ ಪಿ ನಂಬರ್ ಅಳವಡಿಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದು, 2 ಕೋಟಿ ವಾಹನ ಸವಾರರಲ್ಲಿ 1.45 ಕೋಟಿ ಜನ ಇನ್ನೂ ನಂಬರ್ ಪ್ಲೇಟ್ ಅಳವಡಿಸುವಲ್ಲಿ ನಿರ್ಲಕ್ಷ್ಯ  ತೋರಿದಂತಿದೆ.

 

SUMMARY| The state government has extended the deadline for installation of HSRP number plates till December 31.

 

KEYWORDS|  HSRP number plates, state government, extended the deadline, kannadanews, 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು