SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 28, 2025
ಶಿವಮೊಗ್ಗ | ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ಹಾಗೂ ಛಾಯನ್ ಶೆಟ್ಟಿ ನಿರ್ದೇಶನದ ಅಧಿಪತ್ರ ಸಿನಿಮಾದ ಟ್ರೈಲರ್‌ನ್ನು ಶಿವಮೊಗ್ಗದ ಶುಭಂ ಹೋಟೆಲ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಈ ಚಿತ್ರದ ಟ್ರೈಲರ್‌ನ್ನು ಬಂಟರಯಾನೆ ನಾಡವರ ಸಂಘ ಶಿವಮೊಗ್ಗದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಬಿಡುಗಡೆ ಮಾಡಿದರು.
ಹುಲಿ ಬೆನ್ನೇರಿದ ರೂಪೇಶ್ ಶೆಟ್ಟಿ ಟ್ರೈಲರ್‌ನಲ್ಲಿ ಏನಿದೆ

ಟ್ರೈಲರ್ ಅನ್ನು ನೋಡಿದಾಗ ನಿರ್ದೇಶಕರು ಹೇಳಿದಂತೆ ಇದು ಪಕ್ಕ ಕರಾವಳಿ ಭಾಗದ ಮಣ್ಣಿನ ಕಥೆ ಎಂಬುದು ತಿಳಿಯುತ್ತದೆ. ಹೀರೋ ಆದ ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ಖಡಕ್ ಪೋಲಿಸ್ ಅಧಿಕಾರಿ ಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಖಳನಾಯಕನ ಪಾತ್ರವನ್ನು ಹುಲಿಗೆ ಹೋಲಿಸಿದ್ದಾರೆ. ಈ ಹುಲಿ ಯಾವರೀತಿ ಜನರನ್ನು ಕೊಲ್ಲುತ್ತಿತ್ತು. ಜನರಿಗೆ ಹುಲಿಯಿಂದ ಆಗುತ್ತಿದ್ದ ತೊಂದರೆಯೇನು.ಅದಕ್ಕೆ ಕಾರಣವೇನು ಆ ಹುಲಿಯನ್ನು ರೂಪೇಶ್ ಶೆಟ್ಟಿ ಯಾವ ರೀತಿ ಬೇಟೆ ಯಾಡುತ್ತಾರೆ ಎಂಬುದರ ಸಣ್ಣ ಝಲಕ್ ಟ್ರೇಲರ್ ನಲ್ಲಿದೆ. ಇದರ ನಡುವೆ ದೈವದ ತರಹ ವೇಷ ಧರಿಸಿದ್ದ ವ್ಯಕ್ತಿಯಿದ್ದು ಆತನೇ ಮುಖ್ಯ ಖಳನಾಯಕನ ಎಂಬುವ ಅನುಮಾನ ಎಲ್ಲರಲ್ಲೂ ಮೂಡುತ್ತದೆ. ಇದರ ನಡುವೆ ನಿರೂಪಕಿ ಜಾನ್ಹವಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿ ನಟಿಯಾಗಿ ನಟಿಸುತ್ತಿದ್ದು, ಅವರ ಪಾತ್ರವೂ ಸಹ ಬಹಳ ನೈಜತೆಯಿಂದ ಮೂಡಿಬಂದಿದೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರ ಬಹಳ ಪ್ರಭಾವವನ್ನು ಬಿರುತ್ತದೆ. ಹಾಗೆಯೇ ಆವರ ಪಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತದೆ ಎಂಬುದು ರೂಪೇಶ್ ಶೆಟ್ಟಿ ಯವರ ಅಭಿಪ್ರಾಯ. ಟ್ರೇಲರ್ ನಲ್ಲಿ ಗಮನಿಸಿದಾಗ ಹಿನ್ನೆಲೆ ಸಂಗೀತ ಹಾಗು ಪ್ರೊಡಕ್ಷನ್ ವ್ಯಾಲ್ಯೂ ಹೆಚ್ಚು ರಿಚ್ ಆಗಿ ಕಾಣುತ್ತಿದೆ. ಈ ಚಿತ್ರಕ್ಕೆ ಸಂಗೀತವನ್ನು ಶ್ರೀಹರಿ ಶ್ರೇಷ್ಠಿ ಸಂಯೋಜಿಸಿದ್ದು, ಚಿತ್ರಕ್ಕೆ ಬಂಡವಾಳವನ್ನು ದಿವ್ಯ ನಾರಾಯಣ್ ಲಕ್ಷ್ಮಿಗೌಡ ಕುಲದೀಪ್ ರಾಘವ್ ಹೂಡಿದ್ದಾರೆ.
ಒಟ್ಟಾರೆಯಾಗಿ 3 ನಿಮಿಷ ಇರುವ ಈ ಟ್ರೈಲರ್ ನಲ್ಲಿ ಬಹುದೊಡ್ಡ ತಾರಾಬಳಗವಿದೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಸೇರಿದಂತೆ ಆನೇಕ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಸಮಯ 2ಗಂಟೆ 30 ನಿಮಿಷವಿದ್ದು, ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕಾಮಿಡಿಯೊಂದಿಗೆ ಕೂಡಿದೆ. ಹಾಗೆಯೇ ಕಥೆಯೇ ಈ ಚಿತ್ರದ ಹೀರೋ ಎಂಬುದು ನಿರ್ದೇಶಕ ಛಾಯನ್ ಶೆಟ್ಟಿಯವರ ಅಭಿಪ್ರಾಯ. ಈ ಚಿತ್ರ ಇದೆ ಫೆಬ್ರವರಿ 07 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.
SUMMARY | The trailer of Rockstar Rupesh Shetty starrer Adhipatra, directed by Chayan Shetty, was released today at Shubham Hotel in Shivamogga
KEYWORDS | Rockstar, Rupesh Shetty, Adhipatra, trailer, Shivamogga,