SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 8, 2025
ರೇಣುಕಾ ಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ರವರಿಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ನೀಡಿದ್ದು, ಇದೀಗ ಆ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಕೇಸ್ ಹಿನ್ನಲೆ ದರ್ಶನ್ ಬಹಳ ಬ್ಯುಸಿಯಾಗಿದ್ದು ಅವರ ಅಭಿಮಾನಿಗಳಿಗೆ ಹೆಚ್ಚಾಗಿ ಸಿಗುತ್ತಿರಲಿಲ್ಲ. ಈ ಹಿನ್ನಲೆ ದರ್ಶನ್ ಅಭಿಮಾನಿಗಳು ದರ್ಶನ್ ರವರ ಹುಟ್ಟುಹಬ್ಬದ ದಿನವಾದ ಫೆಬ್ರವರಿ 16 ರಂದು ನೆಚ್ಚಿನ ನಟನನ್ನು ಭೇಟಿಯಾಗ ಬಹುದೆಂದು ತುದಿಗಾಲಿನಲ್ಲಿ ಕಾದುಕುಳಿತಿದ್ದರು. ಆದರೆ ಇದೀಗ ದರ್ಶನ್ ರವರು ಅವರ ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿದ್ದಾರೆ. ಅದೇನೆಂದರೆ ಬೆನ್ನು ನೋವಿನ ಹಿನ್ನಲೆ ಈಬಾರಿ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ
ನಮ್ಮನ್ನು ಇದುವರೆಗೂ ಬೆಂಬಲಿಸಿದ ಎಲ್ಲಾ ಸೆಲೆಬ್ರಿಟಿ ಗಳಿಗೆ ಧನ್ಯವಾದಗಳು. ಎಂದಿನಂತೆ ಈ ಬಾರಿಯೂ ನಿಮ್ಮನ್ನೆಲ್ಲಾ ನನ್ನ ಹುಟ್ಟುಹಬ್ಬದಲ್ಲಿ ಬೇಟಿಯಾಗಬೇಕೆಂದುಕೊಂಡಿದ್ದೆ. ಆದರೆ ನನಗೆ ವಿಪರೀತ ಬೆನ್ನುನೋವಿನ ಸಮಸ್ಯೆ ಕಾಡುತ್ತಿರುವುದರಿಂದ ಹೆಚ್ಚು ಹೊತ್ತು ನಿಂತು ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಇಂಜೆಕ್ಸನ್ ಅನ್ನು ತೆಗೆದುಕೊಂಡರೂ ಅದು ಸ್ವಲ್ಪ ದಿನಗಳ ಕಾಲ ಮಾತ್ರ ಕೆಲಸ ಮಾಡುತ್ತದೆ. ಬೆನ್ನುನೋವಿನ ಹಿನ್ನಲೆ ಮುಂದಿನ ದಿನಗಳಲ್ಲಿ ಅಪರೇಷನ್ ಮಾಡಿಸಬೇಕಾದ ಅನಿವಾರ್ಯತೆ ಇದೆ. ನೀವು ನನಗೆ ನೀಡುತ್ತಿರುವ ಸಹಕಾರಕ್ಕೆಆನು ಯಾವಾಗಲೂ ಋಣಿ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಖಂಡಿತ ನಿಮ್ಮನ್ನೆಲ್ಲಾ ಭೇಟಿಯಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ನನ್ನ ಸೆಲೆಬ್ರಿಟಿಗಳು ಊಹಾ ಪೋಹಕ್ಕೆ ಕಿವಿಕೊಡಬಾರದು.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಕೆಲವು ನಿರ್ಮಾಪಕರಿಗೆ ಹಣವನ್ನು ವಾಪಸ್ ನೀಡಿದ್ದಾರೆ ಎಂಬ ಚರ್ಚೆಗಳೂ ನಡೆಯುತ್ತಿದೆ. ನಾನು ಕೆಲವು ನಿರ್ಮಾಪಕರಿಗೆ ಹಣ ಹಿಂದಿರುಗಿಸಿರುವುದು ನಿಜ. ಹಲವು ನಿರ್ಮಾಪಕರು ಸಾಲ ಸೂಲ ಮಾಡಿ ಅವರ ಕಷ್ಟದ ಕಾಲದಲ್ಲಿ ನನಗೆ ಇಂತಿಷ್ಟು ಅಡ್ವಾನ್ಸ್‌ನ್ನು ನೀಡಿದ್ದರು. ಆದರೆ ಈ ಹಿಂದೆ ನಡೆದ ಘಟನೆಯಿಂದ ನನಗೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮಾಡಲು ಸಾಧ್ಯವಾಗಲಿಲ್ಲ.. ನನ್ನಿಂದಾಗಿ ಕಷ್ಟದಲ್ಲಿರುವ ನಿರ್ಮಾಪಕರೂ ಇನ್ನೂ ಕಷ್ಟ ಪಡಬಾರದೆಂಬ ಕಾರಣಕ್ಕೆ ಹಣವನ್ನು ವಾಪಸ್ ನೀಡಿದ್ದೇನೆ ಅಷ್ಟೇ. ಮುಂಬರುವ ದಿನಗಳಲ್ಲಿ ನಾನು ಆ ನಿರ್ಮಾಪಕರೊಂದಿಗೆ ಖಂಡಿತವಾಗಿ ಚಿತ್ರವನ್ನು ಮಾಡುತ್ತೇನೆ ಎಂದರು.
ನಾನು ಪ್ರೇಮ್ ನೊಂದಿಗೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ. ನಾವಿಬ್ಬರೂ ಒಂದುಗೂಡಿ ಸಿನಿಮಾ ಮಾಡಬೇಕೆನ್ನುವುದು ರಕ್ಷಿತರವರ ಆಸೆ ಆದ್ದರಿಂದ ಅವರೊಂದಿಗೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ ಎಂದರು.ಹಾಗೆಯೇ ನಾನು ಬೇರೆ ಭಾಷೆಯ ನಿರ್ದೇಶಕರೊಂದಿಗೆ ಸಿನಿಮಾ ಮಾಡುತ್ತಿದ್ದೇನೆ ಎಂಬ ಊಹಾಪೋಹಗಳು ಇವೆ. ಆದ್ರೆ ಅದೆಲ್ಲ ಸುಳ್ಳು ನಾನು ಇಲ್ಲಿಯೇ ಚೆನ್ನಾಗಿದ್ದೇನೆ ಬೇರೆ ಭಾಷೆಗೆ ಹೋಗಿ ಏನು ಮಾಡಲಿ ಎಂದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.
SUMMARY | Darshan shared a video on social media stating that he will not be celebrating his birthday this time due to back pain.
KEYWORDS | Darshan, social media, birthday, dboss,