SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 21, 2025
ಶಿವಮೊಗ್ಗ ವಿವಿಧ ಆಸ್ಪತ್ರೆಗಳ ಹಬ್ ಆಗಿರೋದು ಮತ್ತು ಇನ್ನಷ್ಟು ಹೈಟೆಕ್ ಆಸ್ಪತ್ರೆಗಳು ಶಿವಮೊಗ್ಗ ನಗರಕ್ಕೆ ಕಾಲಿಡುತ್ತಿರುವ ವಿಚಾರ ಗೊತ್ತೇ ಇದೆ. ಇದರ ನಡುವೆ ಇದೀಗ ಮಲೆನಾಡ ಹೆಬ್ಬಾಗಿಲಿಗೆ ಮತ್ತೊಂದು ವಿಶೇಷವಾದ ಆಸ್ಪತ್ರೆ ಕಾಲಿಡುತ್ತಿದೆ.
ಇದೇ ಮಾರ್ಚ್ 23 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಅಚ್ಯುತ್ ರಾವ್ ಲೇಔಟ್‍ನಲ್ಲಿ ಅಪೂರ್ವ ಫೀಟಲ್ ಮೆಡಿಸನ್ ಸೆಂಟರ್ ಎಂಬ ಹೊಸದೊಂದು ಸಂಸ್ಥೆ ಉದ್ಘಾಟನೆಗೊಳ್ಳಲಿದೆ.
ಅಂದಹಾಗೆ, ಫೀಟಲ್ ಮೆಡಿಸನ್ ಎಂದರೆ ತಾಯಿಯ ಗರ್ಭದಲ್ಲಿರುವ ಮಗುವಿನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಒಂದು ಪ್ರಕ್ರಿಯೆ. ಮಕ್ಕಳು ಹುಟ್ಟುವ ಮುನ್ನವೇ ನಾನಾ ಖಾಯಿಲೆಗಳಿಗೆ ಒಳಪಟ್ಟಿರುವ ಸಾಧ್ಯತೆ ಇರುತ್ತದೆ. ಆದರೆ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯ ಪರಿಶೀಲನೆ ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಇದೀಗ ಶಿವಮೊಗ್ಗದ ಜನರಿಗೆ ಅಂತಹದ್ದೊಂದು ಅವಕಾಶವನ್ನು ಒದಿಗಸುವ ಉದ್ದೇಶ ಇಟ್ಟುಕೊಂಡು, ಆಸ್ಪತ್ರೆಯೊಂದು ಲಾಂಚ್ ಆಗುತ್ತಿದೆ.
ಹಿಂದೆಲ್ಲಾ ಭ್ರೂಣದ ಆರೋಗ್ಯವನ್ನು ತಿಳಿದುಕೊಳ್ಳಲು 5 ತಿಂಗಳು ಕಾಯಬೇಕಿತ್ತು. ಆದರೆ ಈಗ ಮುಂದುವರೆದ ತಂತ್ರಜ್ಙಾನದಿಂದ 3 ತಿಂಗಳಲ್ಲಿ ಮಗುವಿನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು, ಈ ಬಗ್ಗೆ ಮಾಹಿತಿ ನೀಡಿದ ಡಾ. ಅಪೂರ್ವರವರು ಮಗು ಹುಟ್ಟುವುದಕ್ಕೂ ಮೊದಲೇ ಅದರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿರುವುದನ್ನು ಪತ್ತೆ ಮಾಡುವುದರಿಂದ, ಮಗು ಜನ್ಮ ನೀಡಿದ ಬಳಿಕ ಅಗತ್ಯ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗಲಿದೆ ಎಂದರು.
ಭ್ರೂಣ ವೈದ್ಯಕೀಯ ಶಾಸ್ತ್ರ ಎಂಬುದು ಒಬ್ಬ ಮಹಿಳೆಯ ಗರ್ಭಧಾರಣೆಯ ಅವಧಿಯಲ್ಲಿ ಭ್ರೂಣದ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಗಮನಿಸಿ, ತಕ್ಕ ಚಿಕಿತ್ಸೆಯನ್ನು ನೀಡುವ ಜನನೋದ್ಭವಶಾಸ್ತ್ರದ ಒಂದು ಉಪಶಾಖೆಯಾಗಿದೆ.
ತಂತ್ರಜ್ಞಾನದಲ್ಲಿ ಸಾಧಿಸಲಾದ ಪ್ರಗತಿಗಳು ಮತ್ತು ಪರಿಣಿತರ ತರಬೇತಿಯೊಂದಿಗೆ, ಭ್ರೂಣ ವೈದ್ಯಕೀಯವು ಅಸ್ವಾಭಾವಿಕತೆಗಳು ಗುರುತಿಸುವುದು, ಭ್ರೂಣದ ಬೆಳವಣಿಗೆಯನ್ನು ನಿಗದಿತವಾಗಿ ಪರಿಶೀಲಿಸುವುದು ಮತ್ತು ತಕ್ಕ ಸಮಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಈ ಸಂದರ್ಭದಲ್ಲಿ ಭ್ರೂಣ ಗಂಡೋ ಅಥವ ಹೆಣ್ಣೋ ಎಂಬುದನ್ನು ನಾವು ಖಂಡಿತವಾಗಿಯೂ ಯಾರಿಗೂ ತಿಳಿಸುವುದಿಲ್ಲ ಎಂದರು.
ಪ್ರಖ್ಯಾತ ವೈದ್ಯರಿಂದ ಉಪನ್ಯಾಸ
ಇನ್ನೂ ಪೆಟಲ್ ಮೆಡಿಸನ್ ಬಗ್ಗೆ ಮಾತನಾಡುತ್ತಾ ಡಾ.ಅಪೂರ್ವ ಭ್ರೂಣ ತಪಾಸಣಾ ವಿಧಾನಗಳ ಪಿತಾಮಹರಾದ ಡಾ. ಸುರೇಶ್ ಶೇಷಾದ್ರಿ ಹಾಗೂ ಡಾ. ಇಂದ್ರಾಣಿ ಸುರೇಶ್‍ರವರು ನಮ್ಮ ಈ ಅಪೂರ್ವ ಫೆಟಲ್ ಮೆಡಿಸನ್ ಸೆಂಟರ್ ಉದ್ಘಾಟನೆ ಮಾಡಲಿದ್ದಾರೆ ಎಂದರು. ಹಾಗೆಯೇ ಅವರು ನನಗೆ ಗುರುಗಳಾಗಿದ್ದು, ಡಾ. ಇಂದ್ರಾಣಿ ಸುರೇಶ್ ಅವರು 41 ವರ್ಷಗಳ ಅನುಭವ ಹೊಂದ್ದಾರೆ, ಭ್ರೂಣ ಹೃದಯ ಚಿಕಿತ್ಸೆಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ. ಶ್ರೀಧರ.ಎಸ್, ಡಾ. ವಿನಯ್ ಶ್ರೀನಿವಾಸ್, ಡಾ. ರಜಾರಾಮ್.ಯು.ಹೆಚ್, ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ವಿಜ್ಞಾನ ಸೊಸೈಟಿಯ ಡಾ. ಭಾರತಿ.ಹೆಚ್.ಜಿ, ಡಾ. ಪ್ರಿಯಂವಾದ, ಡಾ. ಶಶಿ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
SUMMARY | Various programmes have been organised for two days on March 22 and March 23, said Dr. Apoorva owner of Apoorva Fetal Medicine Center.
KEYWORDS | Apoorva Fetal Medicine Centre, shivmogga, March 22,