SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 10, 2025
ಮಾರುಕಟ್ಟೆಗೆ ಇದೀಗ ಟೆಸ್ಸಾರಾಕ್ಟ್ ಎಂಬ ಹೆಸರಿನ ವಿನೂತನ ಎಲೆಕ್ಟ್ರಿಕ್ ವಾಹನ ಲಗ್ಗೆಇಟ್ಟಿದೆ. ಈ ಸ್ಕೂಟರ್‌ನಲ್ಲಿ ಕಂಪನಿಯು ಹಲವಾರು ವೈಶಿಷ್ಟ್ಯಗಳನ್ನು ಸೇರಿಸಿದ್ದು, ಇದರಲ್ಲಿ ಮುಂಬದಿ ಹಾಗೂ ಹಿಂಬದಿಯಲ್ಲಿ ಎರಡು ಕ್ಯಾಮರಗಳನ್ನೂ ನೀಡಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಒಂದರಲ್ಲಿ ಕ್ಯಾಮರ ಅಳವಡಿಸಿದ ಮೊದಲ ಸ್ಕೂಟರ್ ಇದಗಿದೆ.
ಮೈಲೇಜ್ ಮತ್ತು ರೇಟ್ ಎಷ್ಟು
3.5 kWH, 5k WH ಹಾಗೂ 6k Wh ಎಂಬ ಸಾಮರ್ಥ್ಯದ ಮೂರು ಬ್ಯಾಟರಿಗಳಲ್ಲಿ ಈ ಬೈಕ್ ಲಭ್ಯವಿದ್ದು, 3.5WH ಸಾಮರ್ಥ್ಯದ ಬ್ಯಾಟರಿಯಲ್ಲಿ ಒಮ್ಮೆ ಚಾರ್ಚ್ ಮಾಡಿದರೆ 162 ಕಿಲೋಮೀಟರ್ 5k WH ನಲ್ಲಿ 220 ಕಿಲೋಮೀಟರ್ ಹಾಗೂ 6k Wh ನಲ್ಲಿ ಬರೋಬ್ಬರಿ 261 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಬೈಕ್ 20 ಬಿ ಹೆಚ್ ಪಿ ಮೋಟರ್ ಹೊಂದಿದ್ದು, ಗಂಟೆಗೆ 125 ಸ್ಪೀಡ್‌ನಲ್ಲಿ ಚಲಿಸಲಿದೆ.
ಇನ್ನೂ ಈ ಸ್ಕೂಟರ್ ನ ಬೆಲೆಯನ್ನು ನೋಡುವುದಾದರ 3.5 kWH ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸ್ಕೂಟರ್‌ಗೆ 1 ಲಕ್ಷದ 20 ಸಾವಿರ ರೂಪಯಿಗಳಿದ್ದು, 5k WH ಬ್ಯಾಟರಿ ಸಾಮರ್ಥ್ಯದ ಸ್ಕೂಟರ್‌ಗೆ 1 ಲಕ್ಷದ 70 ಸಾವಿರ ರೂಪಾಯಿ ಹಾಗೆಯೇ 6k Wh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸ್ಕೂಟರ್‌ಗೆ 2 ಲಕ್ಷ ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಬೈಕ್ ಸ್ಟೆಲ್ತ್ ಬ್ಲಾಕ್, ಸೋಲಾರ್ ವೈಟ್, ಸೋನಿಕ್ ಪಿಂಕ್ ಮತ್ತು ಡೆಸಾರ್ಟ್ ಸ್ಯಾಂಡ್ ಎಂಬ ನಾಲ್ಕು ಕಲರ್‌ನಲ್ಲಿ ಲಭ್ಯವಿದೆ.
SUMMARY | A new electric vehicle called Tesseract has been launched in the market.
KEYWORDS | electric vehicle, Tesseract, launched,