ಹಾವಿನೊಂದಿಗೆ ಸೆಣೆಸಾಡಿ ಪ್ರಾಣ ಬಿಟ್ಟ ಪಿಟ್‌ಬುಲ್‌ ನಾಯಿ | ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 22, 2025

ನಿಯತ್ತಿಗೆ  ಇನ್ನೊಂದು ಹೆಸರೆ ನಾಯಿ. ಒಂದು ಹೊತ್ತು ಊಟ ಹಾಕಿದರೆ ಅದು ತನ್ನ ಜೀವವಿರುವ ತನಕ ನಮ್ಮನ್ನು ಒಂದಲ್ಲ ಒಂದು  ರೀತಿಯಲ್ಲಿ ರಕ್ಷಣೆ ಮಾಡುತ್ತಾ ಇರುತ್ತದೆ. ಅದಕ್ಕೆ ನಿದರ್ಶನ ಎಂಬಂತೆ ಇಲ್ಲಿಯೂ ಸಹ ಅಂತಹದ್ದೇ ಒಂದು ಘಟನೆ ನಡೆದಿದೆ. ಅದೇನೆಂದರೆ ಪಿಟ್‌ಬುಲ್‌ ಎಂಬ ಜಾತಿಯ ನಾಯಿ ಮಾಲೀಕನ ರಕ್ಷಣೆಗಾಗಿ ವಿಷಪೂರಿತ ಕಾಳಿಂಗ ಸರ್ಪದೊಂದಿಗೆ ಸೆಣೆಸಾಡಿ ತನ್ನ ಪ್ರಾಣವನ್ನು ಬಿಟ್ಟಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಂದಹಾಗೆ ಈ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಕಟ್ಟಾನ ಎಂಬ ಗ್ರಾಮದಲ್ಲಿ. ನಾರಾಯಣ ಗೌಡ ಎಂಬುವವರ ಮನೆಯಲ್ಲಿ ಕೋಳಿ ಫಾರಂಗೆ ಸುಮಾರು 12 ಅಡಿ ಉದ್ದದ ನಾಗರ ಹಾವು ನುಗ್ಗಿದೆ. ಇದನ್ನು ನೋಡಿದ ಭೀಮ ಎಂಬ ಹೆಸರಿನ ನಾಯಿ ಹಾವಿನಿಂದ ಮಾಲೀಕರಿಗೆ ತೊಂದರೆಯಾಗಬಹುದೆಂದು ಭಾವಿಸಿ ಅದರ ಮೇಲೆ ಎರಗಿದೆ. ನಾಯಿ ಹಾಗೂ ಹಾವಿನ ನಡುವೆ ಸರಿ ಸುಮಾರು 40 ನಿಮಿಷಗಳ ಕಾದಾಟ ನಡೆದಿದ್ದು, ಮೊದಲು ಈ ಕಾದಾಟದಲ್ಲಿ ಹಾವು ಸಾವನ್ನಪ್ಪಿದೆ, ನಂತರ ಹಾವಿನ ವಿಷ ನಾಯಿಯ ದೇಹಕ್ಕೆ ಸೇರಿದ್ದರಿಂದ ಅಸ್ವಸ್ಥವಾದ ನಾಯಿ ಕೆಲ ಸಮಯಗಳ ನಂತರ ಸಾವನ್ನಪ್ಪಿದೆ.

SUMMARY | A dog of a species named pitbull fights with a venomous king cobra to protect its owner and gives up his life

KEYWORDS | dog, pitbull, king cobra, fight, hassan, viral video,

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು