SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 7, 2025
ನಟ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ಈಗಾಗಲೇ ದೇಶ ವಿದೇಶದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಕಾಂತಾರ ಚಾಪ್ಟರ್ 1 ಚಿತ್ರವವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ವಿರುದ್ದ ಕರಾವಳಿ ಭಾಗದಲ್ಲಿ ಅನೇಕ ಅಪಸ್ವರಗಳು ಕೇಳಿ ಬಂದಿತ್ತು. ರಿಷಬ್ ಶೆಟ್ಟಿ ಕಾಂತಾರ ಚಿತ್ರ ಬಿಡುಗಡೆ ಆದಾಗಿನಿಂದ ಅನೇಕರು ದೈವದ ಪಾತ್ರದಲ್ಲಿ ನಟಿಸಿ ದೈವಕ್ಕೆ ಅಪಮಾನ ಮಾಡುವ ರೀತಿಯಲ್ಲಿ ವರ್ತಿಸಿದ್ದರು. ಇದಕ್ಕೆಲ್ಲಾ ರಿಷಬ್ ಶೆಟ್ಟಿಯ ಕಾಂತಾರ ಚಿತ್ರವೇ ಕಾರಣ ಕಾಂತಾರದ ಚಾಪ್ಟರ್ 1 ಚಿತ್ರವನ್ನು ರಿಲೀಸ್ ಮಾಡಲು ಬಿಡುವುದಿಲ್ಲ ಎಂಬ ಮಾತುಗಳು ಕೇಳಿಬಂದವು. ಈ ಹಿನ್ನಲೆ ಇಂತಹ ಆರೋಪಗಳನ್ನು ಎದುರಿಸುತ್ತಿರುವ ರಿಷಬ್ ಶೆಟ್ಟಿ ಇದೀಗ ದೈವದ ಮೊರೆ ಹೋಗಿದ್ದಾರೆ. ದೈವದ ಕೋಲದಲ್ಲಿ ಭಾಗವಹಿಸಿ ತನ್ನ ಕಷ್ಟಗಳನ್ನು ದೈವದ ಮುಂದೆ ಇಟ್ಟಿದ್ದಾರೆ. ದೈವವು ನಿನ್ನೆಲ್ಲಾ ಕಷ್ಟಗಳನ್ನು ಬಗೆ ಹರಿಸುವುದಾಗಿ ಅಭಯ ನೀಡಿದೆ.
ರಿಷಬ್ ಶೆಟ್ಟಿ ತಮ್ಮ ಸಂಸಾರದೊಂದಿಗೆ ಮಂಗಳೂರಿನಲ್ಲಿ ನಡೆಯುತ್ತಿದ್ದ ವಾರಾಹಿ ಪಂಜುರ್ಲಿ ಹಾಗೂ ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ನಂತರ ಕೋಲದಲ್ಲಿ ಪಾಲ್ಗೊಂಡ ಅವರು ತಮ್ಮ ಕಷ್ಟಗಳನ್ನು ದೈವದ ಮಂದೆ ಹೇಳಿಕೊಂಡಿದ್ದಾರೆ. ಆಗ ವಾರಾಹಿ ಪಂಜುರ್ಲಿ ದೈವ ಜಗತ್ತಿನ್ನೆಲ್ಲೆಡೆ ನಿನಗೆ ಬಹಳ ದುಷ್ಮನ್ ಗಳಿದ್ದಾರೆ. ನಿನ್ನ ಸಂಸಾರವನ್ನು ಹಾಳು ಮಾಡಲು ಶತ್ರುಗಳು ಕಾಯುತ್ತಿದ್ದಾರೆ. ನೀನು ನನಗೆ ಸೇವೆ ಮಾಡುವ ಹರಕೆ ಕಟ್ಟಿಕೋ ಇನ್ನು ಐದು ತಿಂಗಳ ಒಳಗಾಗಿ ನಿನ್ನ ಎಲ್ಲಾ ಸಮಸ್ಯೆಗಳನ್ನು ನಾನು ಬಗೆಹರಿಸುತ್ತೇನೆ ಎಂಬ ಅಭಯ ನೀಡಿದೆ.
ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ https://t.co/OvofzKJ1l7…#Rishabshetty #Kantara #Panjurlikola #Mangaluru #Pragathishetty pic.twitter.com/Drm6qKGj15
— PublicTV (@publictvnews) April 7, 2025
ಈಗಾಗಲೇ ರಿಷಬ್ ಶೆಟ್ಟಿಗೆ ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಕಾಡು ನಾಶ ಮಾಡಿದ್ದಾರೆ ಎಂಬ ಆರೋಪ ಸೇರಿದಂತೆ ಇನ್ನಿತರೆ ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ರಿಷಬ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ದೈವ ಅಭಯ ನೀಡಿದ್ದು, ಇದರಿಂದಾಗಿ ರಿಷಬ್ ಶೆಟ್ಟಿ ಮನಸ್ಸು ಹಗುರ ವಾದಂತಾಗಿದೆ.
SUMMARY | Varahi Panjurli God You have many dushmans all over the world. The enemy is waiting to ruin your family. I assured you that you will make a vow to serve me and that I will solve all your problems within five months.
KEYWORDS | Varahi Panjurli, rishab shetty, enemy