ಸ್ನೇಹಿತನ ಮಗನ ಸಾವಿನ ಸಂಕಷ್ಟದಲ್ಲೂ ಜಾಗೃತಿ ಮೂಡಿಸಿದ ಗೆಳೆಯರು | ಗೆಳೆಯರ ಮನವಿ ಏನು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಶಿವಮೊಗ್ಗದ ಶರಾವತಿ ನಗರದಲ್ಲಿ ನಿನ್ನೆ 20 ವರ್ಷದ ಉಲ್ಲಾಸ್‌ ಬೈಕ್‌ ಅಫಘಾತದಲ್ಲಿ ತಲೆಗೆ ತೀವೃವಾಗಿ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ. ಕೈಯಲ್ಲಿ ಹೆಲ್ಮೆಟ್‌ ಇದ್ದರೂ ಸಹ ಅದನ್ನು ಧರಿಸದೆ ಬೈಕ್‌ ಚಲಾಯಿಸಿದ್ದೇ ಆತನ ಸಾವಿಗೆಕಾರಣವಾಗಿದೆ ಎನ್ನಲಾಗಿದೆ. 

ಈ ಹಿನ್ನೆಲೆ ಯುವಕನ ತಂದೆಯ ಗೆಳೆಯರೊಬ್ಬರು ಇಂದು ಮೃತರ ಪಾರ್ಥಿವ ಶರೀರದ ಎದುರುಗಡೆ ನಿಂತು ಬೈಕ್‌ನ್ನು ಚಲಾಯಿಸುವಾಗ ಹಿರಿಯರಿಂದ ಕಿರಿಯರ ವರೆಗೂ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ.  ಧರಿಸುವುದಷ್ಟೇ ಅಲ್ಲದೆ ಹೆಲ್ಮೆಟ್​ನಲ್ಲಿರುವ ಲಾಕ್‌ ಅನ್ನು ಸರಿಯಾಗಿ  ಹಾಕಿಕೊಳ್ಳಿ. ಹೆಲ್ಮೆಟ್‌ ಇದ್ದಿದ್ದರೆ ನನ್ನ ಗೆಳೆಯನ ಮಗ ಇಂದು ಬದುಕುತ್ತಿದ್ದ. ದಯವಿಟ್ಟು ಎಲ್ಲರು ಹೆಲ್ಮೆಟ್‌ ಅನ್ನು ಧರಿಸಿ ಎಂದು ಕೇಳಿಕೊಂಡಿದ್ದಾರೆ. ಅವರ ಈ ವಿಡಿಯೋವನ್ನು ಶಿವಮೊಗ್ಗ  ಸಂಚಾರಿ ಪೊಲೀಸರು ತಮ್ಮ ಖಾತೆಯಲ್ಲಿ ಹಂಚಿಕೊಂಡು ವಾಹನ ಸವಾರರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ.



SUMMARY | A 20-year-old man, Ullas, died of head injuries in a bike accident at Sharavathi Nagar in Shivamogga district yesterday

KEYWORDS | Ullas, died, bike accident,  Shivamogga, 

Share This Article