SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 1, 2025
ಉತ್ತರ ಪ್ರದೇಶ | ಸೊಸೆಯ ಮೇಲೆ ಅತ್ತೆ ಹಾಗೂ ಮಾವ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಈ ಹಿನ್ನಲೆ ಮಹಿಳೆ ಸಹಾಯಕ್ಕಾಗಿ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಛಂಡೀಗಡದಲ್ಲಿ ಮಹಿಳೆಯೊಬ್ಬಳು ತನ್ನ ಹೆತ್ತತಾಯಿಗೆ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಸಾಕಷ್ಟು ವಿರೋಧಗಳು ಸಹ ವ್ಯಕ್ತವಾಗಿತ್ತು. ಆದರೆ ಈಗ ಆ ಘಟನೆ ಮಾಸುವ ಮುನ್ನವೇ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅದೇನೆಂದರೆ ಅತ್ತೆ ಮಾವ ಇಬ್ಬರು ತನ್ನ ಸೊಸೆಗೆ ಕೋಲಿನಿಂದ ಮನಬಂದಂತೆ ಥಳಿಸಿದ್ದಾರೆ. ಆಕೆ ಎಷ್ಟೇ ಕಿರುಚಿದರೂ ಸಹ ಆಕೆಯ ಸಹಾಯಕ್ಕೆ ಯಾರು ಬರಲಿಲ್ಲ.ಕೆಲವು ವರದಿಗಳ ಪ್ರಕಾರ ಮಹಿಳೆಗೆ ತನ್ನ ಪತಿಯೊಂದಿಗೆ ಜಗಳವಿತ್ತು, ಇದರಿಂದಾಗಿ ಆಕೆಯ ಮಾವಂದಿರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Beating of the victim by her brother-in-law, mother-in-law and father-in-law.
(Deoria, U.P.)#Deoriapic.twitter.com/etg5gEr9Wl— Bawaali Shots (@BawaaliShots) March 1, 2025
SUMMARY | In a shocking incident, a daughter-in-law was allegedly assaulted by her mother-in-law and father-in-law in Uttar Pradesh’s Deoria.
KEYWORDS | shocking incident, assaulted, Uttar Pradesh, viral videos,