SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 19, 2025
ಸುದ್ದಿ :1 ಸಾಲದ ಬಾಧೆ ತಾಳಲಾರದೆ ಯೇಗಮ್ಮ(58) ಎಂಬ ರೈತ ಮಹಿಳೆ ನೇಣಿಗೆ ಶರಣಾದ ಘಟನೆ ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಹಿಳೆ ಬೆಳೆ ಬೆಳೆಯಲು ಬ್ಯಾಂಕ್‌ನಲ್ಲಿ 2 ರಿಂದ 3 ಲಕ್ಷ ಸಾಲ ಮಾಡಿದ್ದರು, ಮಳೆ ಸರಿಯಾಗಿ ಬಾರದೆ ಬೆಳೆಯಲ್ಲಿ ನಷ್ಟ ಕಂಡ ಮಹಿಳೆ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ : 02 ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಹೃದಯಾಘಾತದಿಂದ ವ್ಯಕ್ತಿ ಸಾವು
ತೀರ್ಥಹಳ್ಳಿ : ಇಲ್ಲಿನ ತಾಲ್ಲೂಕು ಕಚೇರಿ ಎದುರು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ. ತಾಲೂಕಿನ ಹಾರೋಗೊಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹರಳಿ ಮಠದ ಸಮೀಪದ ಚಿಕ್ಕೊಳ್ಳಿ ವಾಸಿ ವಿಜಯ್ ಕೆಲಸದ ನಿಮಿತ್ತ ತಾಲೂಕು ಕಚೇರಿಗೆ ಬಂದಿದ್ದರು. ಆ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಮೃತಪಟ್ಟಿದ್ದಾರೆ
ಸುದ್ದಿ : 03 ಫೆ.20 ನಗರದ ವಿವಿದೆಡೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗ : ಆಲ್ಕೊಳ ವಿ.ವಿ.ಕೇಂದ್ರದಲ್ಲಿ ಫೀಡರ್ ಎ.ಎಫ್-8ರ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ 20 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರಗೆ ಸೂಡ ಕಾಂಪ್ಲೆಕ್ಸ್, ದಯಾನಂದ ಪ್ರಿಂಟರ್, ಕಾಶೀಪುರ, ಲಕ್ಕಪ್ಪ ಬಡಾವಣೆ, ರೇಣುಕಾಂಬ ಬಡಾವಣೆ, ಲಕ್ಷ್ಮೀಪುರ ಬಡಾವಣೆ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ತಮಿಳ್ ಕ್ಯಾಂಪ್ ಮತ್ತು ಕರುಮಾರಿಯಮ್ಮ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ : 04 ಸಂಗೀತ್ ಸಮರ್ಪಣ್ ಟ್ರಸ್ಟ್ ನಿಂದ ಸುಗಮ ಸಂಗೀತ ಕಲಿಕಾ ಶಿಬಿರ
ಶಿವಮೊಗ್ಗ: ಸಂಗೀತ ಕಲಿಯಲು ಆಸಕ್ತಿ ಇರುವರರಿಗಾಗಿ ಮಾ. 15 ಮತ್ತು 16ರಂದು ಶಿವಮೊಗ್ಗದಲ್ಲಿ ಎರಡು ದಿನಗಳ ಕಾಲ ಧ್ವನಿ ಸಂಸ್ಕರಣಾ, ಸಂಗೀತದ ಪ್ರಕಾರದ ಸುಗಮ ಸಂಗೀತ ಕಲಿಕಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಖ್ಯಾತ ಗಾಯಕಿ ಹಾಗೂ ಸಂಗೀತ್ ಸಮರ್ಪಣ್ ಟ್ರಸ್ಟ್ ನ ಅಧ್ಯಕ್ಷೆ ಸುರೇಖಾ ಹೆಗಡೆ ಹೇಳಿದರು. 15ರಿಂದ 30 ವರ್ಷದ ವಯೋಮಾನದವರು ಇದರಲ್ಲಿ ಭಾಗವಹಿಸಬಹುದು. ಎರಡು ದಿನಗಳ ಈ ಶಿಬಿರದಲ್ಲಿ ಅತ್ಯಂತ ಸರಳ ಶುಲ್ಕವಾಗಿ 500 ರೂ. ನಿಗದಿಪಡಿಸಲಾಗಿದೆ. ಶಿಬಿರ ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.
ಸುದ್ದಿ : 05 ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ
ಜಿಲ್ಲೆಯಲ್ಲಿ ಮಾರ್ಚ್ 1 ರಿಂದ 20 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅವಶ್ಯಕವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಒಟ್ಟು 39 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18218 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಿವಮೊಗ್ಗದಲ್ಲಿ 16 ಭದ್ರಾವತಿ 06, ತೀರ್ಥಹಳ್ಳಿ 03, ಸಾಗರ 05, ಹೊಸನಗರ 03, ಶಿಕಾರಿಪುರ 04, ಸೊರಬ 02 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
SUMMARY | Yegamma (58), a farmer, committed suicide by hanging herself at Iruvakki village near Anandapur on Tuesday.
KEYWORDS | farmer, hanging, Iruvakki,