SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 10, 2025
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘ, ಶಿವಮೊಗ್ಗ ಜಿಲ್ಲಾ ಮೊಗವೀರ ಮಹಾಜನ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 23 ರಂದು ಶಿವಮೊಗ್ಗ ನಗರದ ಮಾಧವ ಮಂಗಲ ಸಭಾ ಭವನದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘದ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ನೆಲೆಸಿರುವ ಗಂಗಾಮತ, ಬೆಸ್ತ, ಮೊಗವೀರ, ಸುಣಗಾರ, ಕೋಲಿ, ಕಬ್ಬಲಿಗ, ಜಾಲಗಾರ, ಬಾರ್ಕಿ ಇತರೆ ಪರ್ಯಾಯ ಹೆಸರುಗಳಿಂದ ಕರೆಯಲ್ಪಡುವ ಉಪಜಾತಿಗಳ ಅನುಕೂಲಕ್ಕಾಗಿ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಸೂಕ್ತ ವಧು-ವರರನ್ನು ಆಯ್ಕೆ ಮಾಡಿಕೊಳ್ಳುವ ಈ ಸದಾವಕಾಶದ ಉಪಯೋಗ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ತಮ್ಮ ಇತ್ತೀಚಿನ 2 (4×6) ಪೋಸ್ಟ್ ಕಾರ್ಡ್ ಅಳತೆಯ ಪೂರ್ಣ ಭಾವಚಿತ್ರದೊಂದಿಗೆ ಬಯೋಡಾಟಾ (ವಧು-ವರರ ಮಾಹಿತಿ ನಮೂನೆ) ಭರ್ತಿ ಮಾಡಿ ಸಂಘದ ಕಛೇರಿಯ ವಿಳಾಸಕ್ಕೆ ದಿನಾಂಕ 15-03-2025ರ ಒಳಗಾಗಿ ತಲುಪಿಸಬೇಕೆಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಸುದ್ದಿ : 02 ಸುಪ್ರೀಂ ಬಜಾಜ್ 3 ವೀಲರ್ ಕಚೇರಿ ಆರಂಭ
ಸುಪ್ರೀಂ ಆಟೋ ಡೀಲರ್ ವತಿಯಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಟ್ರೀಮ್ಪ್ ಮತ್ತು ಸುಪ್ರೀಂ ಬಜಾಜ್ 3 ವೀಲರ್ ಕಚೇರಿ ಮಾರ್ಚ್ 12 ರಂದು ಆರಂಭಗೊಳ್ಳುತ್ತಿದ್ದು ಆರ್ ಟಿಓ ಅಧಿಕಾರಿ ಮುರಗೇಂದ್ರ ಶಿರೋಲ್ ಕರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್, ಬಜಾನ್ ನ ಮುಖ್ಯಸ್ಥ ಅನ್ಸುಲ್ ಚೋಪ್ರಾ ಭಾಗವಹಿಸಲಿದ್ದಾರೆ.
ಸುದ್ದಿ : 03 ಮಾರ್ಚ್ 12 ರಂದು ನವಿಲೆ ಬಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ನವಿಲೆ ಬಸವಾಪುರ ಗ್ರಾಮದ ಶ್ರೀ ನವಿಲೆ ಬಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವನ್ನ ಮಾರ್ಚ್ 12 ರ ಬೆಳಿಗ್ಗೆ 11:30 ಹಮ್ಮಿಕೊಳ್ಳಲಾಗಿದ್ದು ಭಕ್ತಾಧಿಗಳು ಆಗಮಿಸುವಂತೆ ದೇವಾಲಯದ ಆರ್ಚಕರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಮಾರ್ಚ್ 11 ರಂದು ಕಳಸ ಸ್ಥಾಪನೆ, ಕಂಕಣ ಶಾಸ್ತ್ರ, ಆನೆ ಉತ್ಸವ ಹಾಗೂ ಮಾರ್ಚ್ 12 ರಂದು ಹುಬ್ಬ ನಕ್ಷತ್ರದಂದು ಬೆಳಿಗ್ಗೆ 11:30 ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ದಿ : 04 ವಾಸವಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಂದ ವಸ್ತು ಪ್ರದರ್ಶನ
ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಸ್ಕೂಲ್ ನ ಚಿಗುರು ಸಭಾಂಗಣದಲ್ಲಿ ಶನಿವಾರ ಮಕ್ಕಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನ ಮಾಜಿ ಎಂಎಲ್ ಸಿ ಆರ್.ಕೆ.ಸಿದ್ದರಾಮಣ್ಣ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮವನ್ನ ವಾಸವಿ ಶಾಲೆಯಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ಬಿ.ಎಲ್.ಶಾಮಸುಂದರ್
ನಮ್ಮ ಶಾಲೆಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಲೀಡ್ ನ ಶಿಕ್ಷಣ ಅತ್ಯಂತ ಪೂರಕವಾಗಿದೆ. ಕಾನ್ಫರೆನ್ಸ್ ನಲ್ಲಿ ಕನ್ನಡ ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ಶಾಸ್ತ್ರದ ಮಾಡಲ್‌ಗಳನ್ನು ಸ್ವತಃ ಮಕ್ಕಳೇ ಮನೆಯಲ್ಲಿ ಮಾಡಿಕೊಂಡು ಬಂದು ವಸ್ತು ಪ್ರದರ್ಶನದಲ್ಲಿ ಇಟ್ಟಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಸುದ್ದಿ : 05 ಮಾರ್ಚ್ 11 ಮತ್ತು 12 ರಂದು ಶ್ರೀ ವಜ್ರೇಶ್ವರಿ ಮಹಾಗಣಪತಿ ಸ್ಥಿರ ಮೂರ್ತಿ ಪ್ರತಿಷ್ಠಾಪನೆಯ 21 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ
ಮಾರ್ಚ್ 11 ಮತ್ತು 12 ರಂದು ಶ್ರೀ ವಜ್ರೇಶ್ವರಿ ಮಹಾಗಣಪತಿ ಸ್ಥಿರ ಮೂರ್ತಿ ಪ್ರತಿಷ್ಠಾಪನೆಯ 21 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಜ್ರೇಶ್ವರಿ ವಿನಾಯಕ ಸೇವಾ ಟ್ರಸ್ಟ್ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಮಾರ್ಚ್ 11 ರ ಮಂಗಳವಾರ ಸಂಜೆ 7:30 ಕ್ಕೆ ಶ್ರೀ ವಿನಾಯಕ ಪ್ರಾರ್ಥನೆ, ಪುಣ್ಯಾಹ, ಕುಂಭಾಧಿವಾಸ, ಸಪ್ತಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ದಿಗ್ಬಲಿ ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಲಿದೆ, ಮಾರ್ಚ್ 12 ರಂದು ಬೆಳಿಗ್ಗೆ 9 ಗಂಟೆಗೆ ದ್ವಾದಳ ನಾರಿಕೇಳ ಗಣಯಾಗ, 11 ಕ್ಕೆ ಪೂರ್ಣಾಹುತಿ, ಕುಂಭಾಭಿಷೇಕ 12:10 ಕ್ಕೆ ಬ್ರಹ್ಮ ಕುಂಭಾಭಿಷೇಕ, ಮಧ್ಯಾಹ್ನ 1 ಪ್ರಸಾದ ವಿನಿಯೋಗ ಇರಲಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ.
SUMMARY | Here are the top 5 chatpat news stories, including a golden opportunity to choose the right bride and groom
KEYWORDS | chatpat, top 5, shivamogga,