SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 26, 2025
ಸಿಗಂದೂರು ಸೇತುವೆ ಇದೇ ಮೇ ತಿಂಗಳ ಕೊನೆವಾರ ಅಥವಾ ಜೂನ್ ಮೊದಲ ವಾರ ಲೋಕಾರ್ಪಣೆಗೊಳ್ಳಲಿದೆ. ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸೇತುವೆಯ ವೈಭವವನ್ನು ಈಗಾಗಲೇ ಅನೇಕ ಜನರು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ, ಅಷ್ಟೇ ಅಲ್ಲದೆ ಅನೇಕರು ಆ ಸೇತುವೆಯಲ್ಲಿ ಸಂಚರಿಸಲು ಉತ್ಸುಕತೆಯಿಂದ ಕಾದು ಕುಳಿತಿದ್ದಾರೆ. ಇದರ ನಡುವೆ ಕನ್ನಡ ಚಿತ್ರರಂಗದ ನಟರಾಗಿರುವ ಶರಣ್‌ರವರು ಸಿಗಂದೂರು ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದು. ಅಈ ವೇಳೆ ಸೇತುವೆ ನೋಡಿ ಅದರ ದೃಶ್ಯವನ್ನು ಸೆರೆ ಹಿಡಿದು ಪೋಸ್ಟ್ ಹಾಕಿಕೊಂಡಿದ್ದಾರೆ.
ಸಿಗಂದೂರು ಚೌಡೇಶ್ವರಿ ಅಮ್ಮನವರ ದರ್ಶನಕ್ಕೆಂದು ಲಾಂಚ್ ದೋಣಿಯಲ್ಲಿ ಹೋಗುವ ಅನುಭವವೇ ಸ್ಮರಣೀಯ. ಇನ್ನೇನು ಕೆಲವೆ ದಿನಗಳಲ್ಲಿ ಸೇತುವೆ ತೆರೆಯುತ್ತದೆ. ಲಾಂಚ್ ನ ಖುಷಿಯ ಜೊತೆಗೆ ಅಮ್ಮನವರ ದರ್ಶನ, ಮರೆಯಲಾಗದ ಅನುಭವವೇ ಸರಿ ???? pic.twitter.com/rHkEHHAdSR
— Sharaan (@realSharaan) March 24, 2025
ಶರಣ್ ರವರು ಆ ವಿಡಿಯೋಗೆ ಸಿಗಂದೂರು ಚೌಡೇಶ್ವರಿ ಅಮ್ಮನವರ ದರ್ಶನಕ್ಕೆಂದು ಲಾಂಚ್ ದೋಣಿಯಲ್ಲಿ ಹೋಗುವ ಅನುಭವವೇ ಸ್ಮರಣೀಯ. ಇನ್ನೇನು ಕೆಲವೆ ದಿನಗಳಲ್ಲಿ ಸೇತುವೆ ತೆರೆಯುತ್ತದೆ. ಲಾಂಚ್ ನ ಖುಷಿಯ ಜೊತೆಗೆ ಅಮ್ಮನವರ ದರ್ಶನ, ಮರೆಯಲಾಗದ ಅನುಭವವೇ ಸರಿ ಎಂಬ ಕ್ಯಾಪ್ಷನ್ ಅನ್ನು ಕೊಟ್ಟು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
SUMMARY | Sharan, who is an actor from the Kannada film industry, visited the Sigandur temple.
KEYWORDS | Sharan,Sigandur temple, Kannada film, twitter,