SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 20, 2025
ಶಿವಮೊಗ್ಗ ನಗರದ ಹುಲಿ ಮತ್ತು ಸಿಂಹಧಾಮದಲ್ಲಿ ಶಿಕ್ಷಣಾಧಿಕಾರಿಗಳಾಗಿ ಕಾರ್ಯವಹಿಸುತ್ತಿರುವ ಸಿಂಚನರವರಿಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರ, ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 2022-23 ಸಾಲಿನ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂ ಸೇವಕಿ ರಾಜ್ಯ ಪ್ರಶಸ್ತಿಯನ್ನು ಸಿಂಚನಾರಿಗೆ ನೀಡಿ ಗೌರವಿಸಿದರು.
ಸುದ್ದಿ : 02 5 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ/ಹಿಂದುಳಿದ ವರ್ಗದ ಪ್ರತಿಭಾನ್ವಿತ ಬಾಲಕೀಯರ ವಸತಿ ವಿದ್ಯಾಶಾಲೆ ರಾಗಿಗುಡ್ಡ 2025 -26 ಸಾಲಿನ ವಸತಿ ಶಾಲೆಗೆ 5 ನೇ ತರಗತಿಯ ವಿದ್ಯಾರ್ಥಿನಿಯರ ಪ್ರವೇಶಕ್ಕಾಗಿ ಅರ್ಜಿ ವಿತರಣೆಯನ್ನು ಆರಂಭಿಸಲಾಗಿದ್ದು, ಏಪ್ರಿಲ್ 5 ರವರೆಗೆ ಅರ್ಜಿ ವಿತರಿಸಲಾಗುವುದು, ಏಪ್ರಿಲ್ 6 ರಂದು ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿದೆ, ಉಚಿತ ಶಿಕ್ಷಣವನ್ನ ಪರಿಶಿಷ್ಟ ಜಾತಿ ಮತ್ತು ಹಿಂದುಳಿಗ ವರ್ಗದ ಮಕ್ಕಳಿಗೆ ನೀಡುತ್ತಿದ್ದು ಮಕ್ಕಳು ಅನುಕೂಲ ಮಾಡಿಕೊಳ್ಳಬೇಕೆಂದು ವಸತಿ ವಿದ್ಯಾಶಾಲೆಯ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ : 03 ಮಾರ್ಚ್ 21 ಮತ್ತು 22 ರಂದು ಉಚಿತ ಕಿವಿ ತಪಾಸಣಾ ಶಿಬಿರ
ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ವತಿಯಿಂದ ಮಾರ್ಚ್ 21 ಮತ್ತು 22 ರಂದು ನಗರದ ಮಲ್ನಾಡ್ ಇಎನ್ ಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಅಧ್ಯಕ್ಷ ಸುರೇಶ್ ದುರ್ಗಪ್ಪ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಇಎನ್ ಟಿ ತಜ್ಞರಿಂದ ಸಮಾಲೋಚನೆ, ಸ್ಕ್ರೀನಿಂಗ್ ಹಾಗೂ ಹೆಚ್ಚುವರಿಯಾಗಿ ಅರ್ಹ ವ್ಯಕ್ತಿಗಳಿಗೆ ಶ್ರವಣ ಸಾಧನಗಳ ಮೇಲೆ 50% ರಿಯಾಯಿತಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿ : 04 ಮಾರ್ಚ್ 21 ರಂದು ಅಂತರ ರಾಷ್ಟೀಯ ಮಹಿಳಾ ದಿನಾಚರಣೆ
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಹಾಗೂ ಚುಂಚಾದ್ರಿ ಪ್ರತಿಷ್ಠಾನ ದ ವತಿಯಿಂದ ಮಾರ್ಚ್ 21 ರ ಬೆಳಿಗ್ಗೆ 10:30 ಕ್ಕೆ ನಗರದ ಆದಿಚುಂಚನಗಿರಿ ಸಮುದಾಯಭವನದಲ್ಲಿ ಅಂತರ ರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿರಾಮಕೃಷ್ಣ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಜಾನಪದ ನೃತ್ಯ, ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ಆಟೋಟ ಸ್ಪರ್ಧೆ, ಅದೃಷ್ಟ ಮಹಿಳೆ ಸೇರಿದಂತೆ ಬಟ್ಟೆ, ಜ್ಯುವೆಲರಿ, ಹಳೆ ರೇಷ್ಮೇಸೀರೆ ಮಾರಾಟ ಮಳಿಗೆ ತೆರೆಯಲಾಗುವುದು ಎಂದು ತಿಳಿಸಿದರು.
ಸುದ್ದಿ :05 2 ದಿನದ ನಾಯಕತ್ವ ಅಭಿವೃದ್ಧಿ ತರಬೇತಿ, ಒಂದು ದಿನ ಅಧ್ಯಯನ ಪ್ರವಾಸ
ಎನ್ ಸಿಸಿಇ ನವದೆಹಲಿ, ತೋಟಗಾರಿಕಾ ಬೆಳಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಶಿಕಾರಿಪುರ, ಬಸವೇಶ್ವರ ಸಹಕಾರ ಒಕ್ಕೂಟ ಶಿಕಾರಿಪುರ ಇವರ ಸಂಯುಕ್ತಾಶ್ರಮದಲ್ಲಿ ಶಿಕಾರಿಪುರ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ 2 ದಿನದ ನಾಯಕತ್ವ ಅಭಿವೃದ್ಧಿ ತರಬೇತಿ ಮತ್ತು ಒಂದು ದಿನದ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನ ಮಾರ್ಚ್ 22 ಮತ್ತು 23 ರಂದು ಶಿಕಾರಿಪುರ ಪಟ್ಟಣದ ರಜತ ಭವನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
SUMMARY | Sinchana, who works as an education officer at the Tiger and Lion Reserve in Shivamogga city, has been awarded the NSS State Award.
KEYWORDS | NSS State Award, Sinchana, chatpat news,
