ಸಚಿವ ಜಮೀರ್‌ ಅಹಮದ್‌ ವಿರುದ್ಧ ಶಿವಮೊಗ್ಗದಲ್ಲಿ ಜೋರು ಪ್ರತಿಭಟನೆ ! ಕಾರಣ?

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024

ಶಿವಮೊಗ್ಗ | ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರನ್ನು ಕರಿಯಾ ಎಂದು ಕರೆದು ನಿಂದಿಸಿದ ವಿಚಾರಕ್ಕೆ ಸಂಬಂಧಿಸಿದಂತೆ  ಸಚಿವ ಜಮೀರ್‌ ಅಹಮದ್‌ ರವರನ್ನು ಕೂಡಲೆ ಬಂಧಿಸಬೇಕು. ಹಾಗೂ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್‌   ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜೆಡಿಎಸ್‌ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಮನವಿ ಪತ್ರದಲ್ಲಿ ಏನಿದೆ?

ಜಮೀರ್‌ ಅಹಮದ್‌ ಕರ್ನಾಟಕ ಪ್ರದೇಶ ಜನತಾದಳದ ಅಧ್ಯಕ್ಷರಾದ  ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ಅಸಭ್ಯ ಪದ ಬಳಸಿದ್ದಾರೆ. ಈ ಮೂಲಕ ಅವರು ವರ್ಣಭೇದವನ್ನು ತೋರಿದ್ದಾರೆ.ಆ ಹಿನ್ನಲೆ ಸಚಿವ ಜಮೀರ್ ಅಹಮ್ಮದ್ ಖಾನ್ ರವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಹಾಗೆಯೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವ ಮೂಲಕ  ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂಬಂಧ  ಗೌರವಾನ್ವಿತ ರಾಜ್ಯಪಾಲರು ಜಮೀರ್‌ ಅಹ್ಮದ್ ರವರನ್ನು ಈ ತಕ್ಷಣ‌ ಸಚಿವ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಒತ್ತಾಯಿಸಲಾಗಿದೆ.

SUMMARY| Minister Zameer Ahmed

KEY WORDS | Minister Zameer Ahmed, Kumar Swamy, politics, kannadanews,

Share This Article