SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 18, 2025
ಶಿವಮೊಗ್ಗ : 1978 ರ ಪೂರ್ವದಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಭೂ ಮಂಜೂರಾತಿ ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ದೂರಿದರು. ಇವತ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಗಾಂಧಿನಗರ ಮತ್ತು ಉಡುಗಣಿ ಗ್ರಾಮದ 150 ಕ್ಕೂ ಹೆಚ್ಚು ರೈತರು 1980 ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮುನ್ನ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಕೈಬರಹದ ಪಹಣಿ ಮತ್ತು ದಂಡ ಕಟ್ಟಿದ ರಸೀದಿ ಹೊಂದಿದ್ದಾರೆ. ಮೇಲಾಗಿ ಜಮೀನು ಮಂಜೂರಾತಿ ಮಾಡುವಂತೆ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿ 29 ವರ್ಷ ಕಳೆದಿದೆ. ಈ ನಡುವೆ ಮಂಜೂರಾತಿ ಮಾಡದೇ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು.
1978 ರ ಪೂರ್ವದಲ್ಲಿ ಸಾಗುವಳಿ ಮಾಡಿದ ರೈತರು ಕೈಬರಹದ ಪಹಣಿ ಮತ್ತು ದಂಡ ಕಟ್ಟಿದ್ದ ರಶೀದಿ ಇದ್ದರೆ ಭೂ ಮಂಜೂರಾತಿ ಮಾಡಬಹುದು ಎಂದು 1980 ರ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿದೆ. ಇದಕ್ಕೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಂಟು ಆದೇಶಗಳಿವೆ. ಆದರೂ ಭೂ ಮಂಜೂರಾತಿ ಮಾಡದಿರುವುದು ಸರಿಯಲ್ಲ ಎಂದ ಅವರು, ಈ ಸಲುವಾಗಿ ಸಚಿವರು ಸಂಸದರು ಮತ್ತು ಶಾಸಕರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪರವರು ವಿಧಾನ ಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಉಪಸ್ಥಿಯಲ್ಲಿ ಸಭೆ ನಡೆಸಿದ್ದ ಸಂದರ್ಭದಲ್ಲಿ ದಾಖಲೆಗಳ ಸಮೇತ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಲಾಗಿತ್ತು. ಆದರೆ ಇಲ್ಲಿಯ ತನಕ ಯಾವುದೇ ಹಕ್ಕುಪತ್ರ ವಿತರಣೆ ಮಾಡಿಲ್ಲ , ಹೀಗಾಗಿ ಭೂ ಮಂಜುರಾತಿ ಸಂಬಂಧ ಹೋರಾಟ ಅನಿವಾರ್ಯವಾಗಿದ್ದು ಕೂಡಲೇ ಮಂಜೂರಾತಿ ನೀಡದ ಪಕ್ಷದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದಿದ್ದಾರೆ.
SUMMARY | Malnad Raitha horata Samithi convener T N Srinivas said the forest department officials had violated the law by not allotting land to farmers who had cultivated forest land before 1978.
KEYWORDS | T N Srinivas, forest department, farmers, Malnad Raitha horata Samithi,