SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 3, 2025
ರಾಜ್ಯದ ಪ್ರತಿಷ್ಠಿತ ಆನೆ ಬಿಡಾರಗಳಲ್ಲಿ ಸಕ್ರೆಬೈಲು ಆನೆ ಬಿಡಾರಕ್ಕೆ ವಿಶೇಷ ಸ್ಥಾನವಿದೆ. ಈ ಬಿಡಾರದಲ್ಲಿ ನೂರಾರು ಆನೆಗಳು ಬದುಕು ಕಂಡುಕೊಂಡಿವೆ. ಅರವತ್ತರ ದಶಕದಿಂದ ಈವರೆಗೆ ಹಲವಾರು ಆನೆಗಳನ್ನು ಸೆರೆಹಿಡಿದು ಇಲ್ಲಿ ಪಳಗಿಸಲಾಗಿದೆ. ಸಕ್ರೆಬೈಲಿನಲ್ಲಿಯೇ ಹುಟ್ಟಿ ಇಲ್ಲಿಯೇ ಬದುಕಿ ಬಾಳಿದ ಆನೆಗಳು ಸಾವನ್ನಪ್ಪಿವೆ. ಆನೆಗಳು ವಯೋಜಸಹವಾಗಿ ಸಾಯುವುದು ಇಲ್ಲವೇ ಅನಾರೋಗ್ಯದಿಂದ ಸಾವನ್ನಪ್ಪಿದ ಉದಾಹರಣೆಗಳು ಸಾಕಷ್ಟಿದೆ.
ಶೆಟ್ಟಿಹಳ್ಳಿ ಕಾಡಿನ ಪರಿಸರದಲ್ಲಿ ಮೇವನ್ನು ತಿನ್ನುವ ಆನೆಗಳಿಗೆ ತುಂಗಾ ನದಿಯ ನೀರು ಜೀವಸೆಲೆಯಾಗಿದೆ. ಬಿಡಾರದಲ್ಲಿ ಇಪ್ಪತ್ತಕ್ಕೂ ಹೆಚ್ಚಿರುವ ಸಾಕಾನೆಗಳಿಗೆ ಅನಾರೋಗ್ಯವಾದರೆ, ಕನಿಷ್ಠ ಚಿಕಿತ್ಸೆ ನೀಡುವ ಆಸ್ಪತ್ರೆಯೂ ಬಿಡಾರದಲ್ಲಿಲ್ಲ. ಇದೇ ಇಲ್ಲಿನ ವಿಪರ್ಯಾಸ. ಕೇವಲ ವನ್ಯಜೀವಿ ವೈದ್ಯರು ಪ್ರತಿದಿನ ಆನೆಗಳ ಆರೋಗ್ಯ ತಪಾಸಣೆ ಮಾಡಿದ್ರೆ ಸಾಲದು.ಇದಕ್ಕೆ ಪೂರಕವಾಗಿ ಆನೆಗಳಿಗಾಗಿ ಒಂದು ಆರೈಕೆ ಕೇಂದ್ರ ಬೇಕಲ್ಲವೇ ಎಂಬುದು ಹಲವು ಪ್ರಾಣಿಪ್ರೀಯರ ಆಗ್ರಹವಾಗಿದೆ.
ಕೆಲ ವರ್ಷದ ಹಿಂದೆ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಲ್ಲಿ ಹರ್ಪಸ್ ವೈರಸ್ ರೋಗ ಕಾಣಿಸಿಕೊಂಡು ಎರಡು ಆನೆಗಳು ಸಾವನ್ನಪ್ಪಿದವು. ಈ ಸಂದರ್ಭದಲ್ಲಿ ಬಿಡಾರದಲ್ಲಿ ಒಂದು ವ್ಯವಸ್ಥಿತ ಆಸ್ಪೆತ್ರೆ ಇರೇಕೆಂಬ ಕೂಗು ಕೇಳಿ ಬಂದಿತ್ತು. ಡೀಪ್ ಪ್ರೀಝ್ ನಲ್ಲಿಡಬೇಕಾದ ಔಷಧಿಗಳೇ ಹೆಚ್ಚಿರುವ ಸಂದರ್ಭದಲ್ಲಿ ಕ್ಯಾಂಪ್‌ನಲ್ಲಿ ಒಂದು ಪ್ರಿಡ್ಜ್ ವ್ಯವಸ್ಥೆಯೂ ಇಲ್ಲ. ಡೀಪ್ ಪ್ರೀಝ್ ನಲ್ಲಿರಬೇಕಾದ ಔಷಧಿಗಳು ಸಾಮರ್ಥ್ಯ ಕಳೆದುಕೊಂಡಾಗ ಅದು ಆನೆಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೇಳಿಕೇಳಿ ಇಲ್ಲಿ ಸೆರೆಹಿಡಿದ ಆನೆಗಳನ್ನು ಖೆಡ್ಡಾಗೆ ತಂದಾಗ, ಅರವಳಿಕೆಯ ಮದ ಇಳಿಯಬೇಕಾದ್ರೆ..ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಆನೆಯ ಮೇಲೆ ಹಾಕಬೇಕಾಗುತ್ತದೆ.
ಈ ಹಿಂದೆ ದಾಂಡೇಲಿಯಿಂದ ಕಾಡಾನೆಯನ್ನು ತಂದ ಸಂದರ್ಭದಲ್ಲಿ ಕ್ರಾಲ್ ಬಳಿ ನೀರಿನ ವ್ಯವಸ್ಥೆ ಇರಲಿಲ್ಲ. ಕಾಡಾನೆಗೆ ಸಿಂಪಡಿಸಬೇಕಾದ ನೀರು ವಿಳಂಬವಾಗಿದ್ದಕ್ಕೆ ಅದು ಸಾವನ್ನಪ್ಪಿತು. ತದನಂತರದಲ್ಲಿ ಎಚ್ಚೆತ್ತ ಅಧಿಕಾರಿಗಳು ಕ್ರಾಲ್ ಬಳಿ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಿದರು. ಈಗ ಕ್ಯಾಂಪ್ ಬಳಿ ಇಲ್ಲವೇ ಕ್ರಾಲ್ ಬಳಿ ಆನೆಗಳಿದಾಗಿ ಆಸ್ಪತ್ರೆಯನ್ನು ನಿರ್ಮಿಸಿದರೆ ಅವುಗಳ ಲಾಲನೆ ಪಾಲನೆಗೆ ಹೆಚ್ಚು ಅನುಕೂಲವಾಗುತ್ತದೆ. ಇದು ಪ್ರಾಣಿ ಪ್ರೀಯರ ಕಳಕಳಿಯಲ್ಲದೇ.ಅರಣ್ಯಾಧಿಕಾರಿಗಳ ಮೇಲಿನ ವಿರೋಧಕ್ಕಾಗಿ ಅಲ್ಲ. ಕೂಡಲೆ ಸಿಸಿ ಎಫ್ ಹನುಮಂತಪ್ಪರವರು ದೊಡ್ಡ ಮನಸ್ಸು ಮಾಡಿ ಸಕ್ರೆಬೈಲಿನಲ್ಲಿ ಆನೆ ಆಸ್ಪತ್ರೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ.
SUMMARY | Sakrebailu Elephant Camp has a special place among the prestigious elephant camps in the state. Hundreds of elephants have found their livelihood in this camp.
KEYWORDS | Sakrebailu, Elephant Camp, treatment, hospital,