SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 4, 2025
ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರದಲ್ಲಿ ಹೆಣ್ಣಾನೆಗಿಂತಲೂ ಗಂಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ನಾಲ್ಕರಿಂದ ಐದು ಗಂಡಾನೆಗೆ ಒಂದು ಹೆಣ್ಣಾನೆಯಾದ್ರೂ ಸಂಗಾತಿಯಾಗಿರಬೇಕಾದ ಅನಿವಾರ್ಯತೆ ಇದೆ. ಆದರೆ ಈಗಿರುವ ಇಪ್ಪತ್ತು ಗಂಡಾನೆಗಳಿಗೆ ಕೇವಲ ನಾಲ್ಕು ಹೆಣ್ಣಾನೆಗಳಿವೆ. ಹೆಣ್ಣಾನೆಗಳು ಬಿಡಾರದ ಗಂಡಾನೆಗಳಿಗೂ ಹಾಗು ಶೆಟ್ಟಿಹಳ್ಳಿ ಕಾಡಾನೆಗಳಿಗೂ ಸಂಗಾತಿಯಾಗಿ ಗುರುತಿಸಿಕೊಂಡಿವೆ. ಹೆಣ್ಣಾನೆಗಳನ್ನು ಬೇರೆಡೆ ವರ್ಗಾಯಿಸುವುದರಿಂದ ಬಿಡಾರದ ಗಂಡಾನೆಗಳನ್ನ ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತದೆ. ಎನಿಮಲ್ ಎಕ್ಸ್ ಚೆಂಜ್ ಪ್ರೋಗ್ರಾಮ್ ಅಡಿ ಈಗಾಗಲೇ 2011 ರಲ್ಲಿ ಪ್ರಕೃತಿ ಹೆಣ್ಣಾನೆಯನ್ನು ಪಾಂಡಿಚೇರಿಗೆ ಸ್ಥಳಾಂತರಿಸಲಾಗಿತ್ತು. 2017 ರಲ್ಲಿ ಸಕ್ರೆಬೈಲು ಆನೆ ಬಿಡಾರದಿಂದ ನಾಲ್ಕು ಸಾಕಾನೆಗಳನ್ನು ಜಾರ್ಖಂಡ್ ನ ದುದ್ವಾ ಸಫಾರಿಗೆ ಕಳುಹಿಸಲಾಗಿತ್ತು. ಅಮೃತ(12) ,ಅದರ ಮರಿ ಪಾರ್ವತಿ (2), ಕಿರಣ(4), ಹಾಗು ಭಾಸ್ಕರ (5) ಸಣ್ಣ ಆನೆಗಳೇ ಆಗ ಜಾರ್ಖಂಡ್ ಗೆ ಸಾಗಿಸಲಾಗಿತ್ತು. ಅಂದು ರಾಜ್ಯದಿಂದ ಎಂಟು ಆನೆಗಳು ಉತ್ತರ ಪ್ರದೇಶದ ದೂದ್ವಾ ನ್ಯಾಷನಲ್ ಪಾರ್ಕ್‌ಗೆ ಸ್ಥಳಾಂತರಗೊಂಡಿದ್ದು,ಅಲ್ಲಿ ಘೆಂಡಾಮೃಗಗಳ ಸಫಾರಿಗೆ ಹಾಗು ಪೆಟ್ರೋಲಿಂಗ್‌ಗೆ ಬಳಸಲಾಗಿತ್ತು. ಈಗ ಮತ್ತೆ ಹೇಮಾವತಿ ಮರಿಯಾನೆಯನ್ನು ದುಬಾರಿಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಪಾಲನೆ ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಅರಣ್ಯ ಮಂತ್ರಿಗಳು ಈ ಅವೈಜ್ಞಾನಿಕ ಪ್ರಕ್ರೀಯೆಯನ್ನು ಕೈಬಿಡಬೇಕಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ಥಳಾಂತರಗೊಂಡ ಆನೆಗಳ ಪೈಕಿ ಹೆಣ್ಣಾನೆಗಳ ಸಂಖ್ಯೆ ದೊಡ್ಡದಿದೆ .ಹೇಮಾವತಿಗೆ ಇನ್ನು ಒಂಬತ್ತುವರೆ ವರ್ಷ. ಈಗಾಗಲೇ ಅದು ಕಾಡಾನೆಯ ಸಂಪರ್ಕದಲ್ಲಿದ್ದು. ಒಂದು ಮರಿಗೂ ಜನ್ಮ ನೀಡಿತ್ತು. ಆದರೆ ಅನಾರೋಗ್ಯದಿಂದ ಮರಿ ಸಾವನ್ನಪ್ಪಿತು. ಹೇಮಾವತಿಯನ್ನು ದುಬಾರಿಗೆ ಸ್ಥಳಾಂತರಗೊಳಿಸಿದರೆ ಸಕ್ರೆಬೈಲು ಬಿಡಾರದ ಪಾಲಿಗೆ ಅದು ದೊಡ್ದ ಸೆಟ್ ಬ್ಯಾಕ್ ಆಗಲಿದೆ. ಇದು ಅರಣ್ಯಾಧಿಕಾರಿಗಳಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಹಾಸನ ಜಿಲ್ಲೆಯಿಂದ ಬಿಡಾರಕ್ಕೆ ಕರೆತಂದ ವಿಕ್ರಾಂತ್ ಹಾಗು ಮಕ್ನಾ ಗಂಡಾನೇ ಸೇರಿದಂತೆ ಒಟ್ಟು ಇಪ್ಪತ್ತು ಗಂಡಾನೆಗಳು ಕ್ಯಾಂಪ್‌ನಲ್ಲಿವೆ. ಇಷ್ಟು ದೊಡ್ಡ ಪ್ರಮಾಣದ ಗಂಡಾನೆಗಳಿಗೆ ಏನಿಲ್ಲವೆಂದರೂ ಆರರಿಂದ ಎಂಟು ಸಾಕಾನೆಗಳಾದ್ರೂ ಇರಬೇಕಾಗುತ್ತದೆ. ಈಗಿರುವ ನಾಲ್ಕು ಹೆಣ್ಣಾನೆಗಳಲ್ಲಿ ಒಂದು ಸಂಖ್ಯೆ ಕಡಿಮೆಯಾದ್ರೂ,ಮಾವುತರಿಗೆ ಗಂಡಾನೆಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ಬಿಡಾರದಲ್ಲಿ ಏಕೆ ಹೆಣ್ಣಾನೆಗಳು ಇರಬೇಕು?
ಪ್ರಕೃತಿ ಸಹಜವಾಗಿ ಗಂಡು ಹೆಣ್ಣಿಗೆ ಆಕರ್ಷಣೆಯಾಗಿರುತ್ತಾನೆ. ಅದೇ ರೀತಿ ಪ್ರಾಣಿಗಳಲ್ಲೂ ಈ ನಿಯಮವಿದೆ. ಹೆಣ್ಣಾನೆಯೊಂದಿಗೆ ಗಂಡಾನೆ ಇದ್ದಾಗ ಅದು ಸೌಮ್ಯ ಸ್ವಭಾವವನ್ನು ಹೊಂದಿರುತ್ತದೆ. ಬಿಡಾರದಲ್ಲಿ ಹೆಣ್ಣಾನೆಯೊಂದು ಮರಿಗೆ ಜನ್ಮ ನೀಡಿದಾಗ ಅದರ ಆರೈಕೆಗೆ ಮತ್ತೊಂದು ಹೆಣ್ಣಾನೆ ಬೇಕು. ಇಲ್ಲಿ ಹಿರಿಯ ಹೆಣ್ಣಾನೆಯೇ ಬಾಣಂತನದ ಜವಬ್ದಾರಿ ಹೊತ್ತಿರುತ್ತದೆ.
ಕಾಡಾನೆಗಳ ಕಾರ್ಯಾಚರಣೆಗೆ ಹೋದಾಗ ಅಲ್ಲಿ ಕೂಡ ಹೆಣ್ಣಾನೆ ಬೇಕಾಗುತ್ತದೆ. ಕೇವಲ ಗಂಡಾನೆಗಳನ್ನು ಇಟ್ಟುಕೊಂಡು ಕಾಡಾನೆ ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ ಐದು ಕುಮ್ಕಿ ಆನೆಗಳಿದ್ದರೆ ಅದರಲ್ಲಿ ಒಂದಾದ್ರೂ ಹೆಣ್ಣಾನೆಯನ್ನು ಬಳಸಲಾಗುತ್ತದೆ.
ಇನ್ನು ದಸರಾ ಉತ್ಸವದಂತೆ ಮೆರವಣಿಗೆಯಲ್ಲಿ ಸಹ ಹೆಣ್ಣಾನೆಯನ್ನ ಬಳಸಲಾಗುತ್ತದೆ.
ಬಿಡಾರದಲ್ಲಿ ಗಂಡಾನೆಗೆ ಚಿಕಿತ್ಸೆ ನೀಡುವಾಗ ಪಕ್ಕದಲ್ಲಿ ಒಂದು ಹೆಣ್ಣಾನೆಯನ್ನು ಬಳಸಿಕೊಳ್ಳಲಾಗುತ್ತದೆ.
ಹೇಮಾವತಿ ಸ್ಥಳಾಂತರ ನಿಕ್ಕಿ
ಹೇಮಾವತಿ ಆನೆಯನ್ನು ದುಬಾರಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿರವುದು ನಿಜ.ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು,ಇನ್ನೆರೆಡು ದಿನಗಳಲ್ಲಿ ಹೇಮಾವತಿ ದುಬಾರಿಗೆ ಸ್ಥಳಾಂತರಗೊಳ್ಳಲಿದೆ. ಹೇಮಾವತಿ ತೆರವಿನಿಂದ ಬಿಡಾರದಲ್ಲಿ ಕೇವಲ ಮೂರು ಹೆಣ್ಣಾನೆಗಳು ಉಳಿದಂತಾಗುತ್ತದೆ.
SUMMARY | The state’s prestigious Sakrebailu elephant camp has more males than females
KEYWORDS | Sakrebailu, elephant camp, female elephant, hemavathi shift,