ಶ್ರೀ ರಾಮನ ಆದರ್ಶ ಪ್ರವಚನ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮ | ಎಲ್ಲಿ ಗೊತ್ತಾ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 25, 2024

ಶಿವಮೊಗ್ಗ | ಶ್ರೀರಾಮನ ಆದರ್ಶ ಪ್ರವಚನ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮ  ಡಿ. 31 ರಿಂದ ಜನವರಿ 2 ರವರೆಗೆ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಶುಭ ಮಂಗಳದ ಸಮುದಾಯ ಭವನದಲ್ಲಿ ಸಂಜೆ 6:30 ರಿಂದ 8 ರವರೆಗೆ ನಡೆಯಲಿದೆ. ಈ ಕುರಿತು ಉಪನ್ಯಾಸಕರಾದ ಡಾ ಮೈತ್ರಿ ತಿಳಿಸಿದರು.

- Advertisement -

ಇಂದು ನಗರದ ಪತ್ರಿಕಾ ಭವನದಲ್ಲಿ ಶ್ರೀಗಂಧ  ಸಾಂಸ್ಕ್ರತಿಕ ಸಂಸ್ಥೆಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಸಂಸ್ಥೆ  ಸದ್ಭಾವ, ಸದ್ವಿಚಾರ, ಸದಭಿರುಚಿ ಮತ್ತು ಸತ್ಕಾರ್ಯಗಳನ್ನೊಳಗೊಂಡ ಕಾರ್ಯಕ್ರಮದ ಮೂಲಕ ನಗರದ ಜನರಲ್ಲಿ ತನ್ನದೇ ಆದ ಅಭಿಮಾನವನನ್ನು ಹೊಂದಿದೆ. ನಾವು ಈ ಕಾರ್ಯಕ್ರಮವನ್ನು ಡಿಸೆಂಬರ್‌ 31 ರಂದು ಇಟ್ಟುಕೊಳ್ಳಲು ಮುಖ್ಯ ಕಾರಣ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವುದರ ಮೂಲಕ ಹೊಸವರ್ಷವನ್ನು ಆಚರಿಸಿಕೊಳ್ಳೋಣ ಎಂಬುದು ಎಂದರು.

ಈ ಕಾರ್ಯಕ್ರಮ 3 ದಿನಗಳ ಕಾಲ ಸಂಜೆ 6:30 ರಿಂದ 8 ಗಂಟೆಯ ವರೆಗೆ ನಡೆಯುತ್ತದೆ. ಹಾಗೆಯೇ ಈ ಕಾರ್ಯಕ್ರಮದಲ್ಲಿ ಶ್ರೀ ರಾಮನ ಆದರ್ಶ ಪ್ರವಚನ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮವನ್ನು ಶ್ರೀ 1008 ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ 6:30 ಕ್ಕೆ ಆರಂಭವಾದರೆ ಇದಕ್ಕೂ ಮೊದಲು 6 ಗಂಟೆಗೆ ಸನಾತನ ಧರ್ಮದ ಸಾರ ಎಂಬ ಚರ್ಚೆಯನ್ನು ಇಟ್ಟುಕೊಂಡಿದ್ದೇವೆ. ಈ ಚರ್ಚಾ ಕಾರ್ಯಕ್ರಮವನ್ನು ಪಂಡಿತ ಶ್ರೀ ನವರತ್ನ ಶ್ರೀನಿವಾಸ ಆಚಾರ್ ಶ್ರೀರಘೋತ್ತಮಾಚಾರ್ ಸಂಡೂರು, ಶ್ರೀ ರಾಯಚೂರು ಕೃಷ್ಣಚಾರ್ ನಡೆಸಿಕೊಡಲಿದ್ದಾರೆ ಎಂದರು.

ಈ ಹಿಂದೆ ಶ್ರೀಗಂಧದ ಕಾರ್ಯಕ್ರಮಗಳಲ್ಲಿ ಶ್ರೀಗಳು ಭಾಗವಹಿಸಿ ಪ್ರವಚನ ನೀಡಿದ್ದರು. ಅದು ಯಶಸ್ವಿಯು ಆಗಿತ್ತು. ಅದರಂತೆ  ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಕೆ. ಎಸ್ ಈಶ್ವರಪ್ಪನವರು ಹಾಗೂ ಶ್ರೀ ಕೆ.ಈ ಕಾಂತೇಶ್ ಅವರ ಮನವಿ ಮೇರೆಗೆ ಈ ಬಾರಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು.

SUMMARY |  Sri Rama’s Adarsh Discourse and Anugraha Sandesha Programme d. The event will be held from January 31 to January 2 at Shubhamangala Community Hall in the city from 6.30 pm to 8 pm.

KEYWORDS | Sri Rama, Shubhamangala Community Hall,  shivamogga,

Share This Article
Leave a Comment

Leave a Reply

Your email address will not be published. Required fields are marked *