SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 7, 2025
ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಇತರೆ ರಾಜಕಾರಣಿಗಳಿಗಿಂತ ಕೊಂಚ ಭಿನ್ನ. ಶೋ ಅಪ್ ರಾಜಕಾರಣಿಯಂತೂ ಖಂಡಿತ ಅಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆ ಶರಾವತಿ ಮುಳುಗಡೆ ಸಂತ್ರಸ್ಥರ ಬಹುದಿನದ ಭೂ ಹಕ್ಕಿನ ಬೇಡಿಕೆಯನ್ನ ಈಡೇರಿಸಲು ಟೊಂಕಕಟ್ಟಿ ನಿಂತಿದ್ದಾರೆ. ಶೋಷಿತರ ಪರ ಯಾವುದೇ ಹೋರಾಟ ಪ್ರತಿಭಟನೆ ಎಂದರೆ ಅದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ. ದಂಡಾವತಿ ವಿರೋಧಿ ಹೋರಾಟದಿಂದ ಹಿಡಿದು ಕೆರೆಹಳ್ಳಿ ಬಗರ್ ಹುಕುಂ ರೈತರ ಪರ ಹೋರಾಟ ಪಾದಯಾತ್ರೆ ಮಾಡಿದ್ದಾರೆ. ಕ್ಷೇತ್ರದ ನೀರಾವರಿ ಯೋಜನೆಗಾಗಿ ಶಿವಮೊಗ್ಗದವರೆಗೆ ಪಾದಯಾತ್ರೆ ಮಾಡಿದ್ದಾರೆ. ಪಾದಗಳಲ್ಲಿ ಬಿರುಕು ಮೂಡಿ ರಕ್ತ ಹರಿದರೂ ಅದನ್ನ ಲೆಕ್ಕಿಸಿದೆ ರಸ್ತೆಯಲ್ಲಿ ನಡೆದು ಜನರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿದ್ದಾರೆ.
ಮಧು ಬಂಗಾರಪ್ಪ ಗೆಲುವಿಗಿಂತ ಸೋಲಿನಲ್ಲೇ ಹೆಚ್ಚು ಗೆಲುವು ಕಂಡವರು. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಮನಗಂಡವರು. ತಾವು ಸೋತಾಗಲೂ ಕ್ಷೇತ್ರದ ಜನತೆಯ ಹಿತಕ್ಕಾಗಿಯೇ ಹೋರಾಟ ಮಾಡಿದ್ದಾರೆ. ಈಗ ಶಿಕ್ಷಣ ಸಚಿವರಾದ ನಂತರ ತಮ್ಮ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶಂಕುಸ್ಥಾಪನೆ ಗುದ್ದಲಿ ಪೂಜೆಗಳು ನಿರಂತರವಾಗಿ ನಡೆಯುತ್ತಿದೆ. ಕೆರೆಗಳ ಅಭಿವೃದ್ಧಿ ಮಾಡಿದ್ದಾರೆ. ರಸ್ತೆ ಅಭಿವೃದ್ಧಿ ಕಂಡಿವೆ.
ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಭಿನ್ನವಾಗಿರಬೇಕು ಎಂಬ ಮಹತ್ವಾಕಾಂಕ್ಷೆಯಿಂದ ನಮ್ಮ ಶಾಲೆ ನಮ್ಮ ಜವಬ್ದಾರಿ ಎಂಬ ಯೋಜನೆ ಜಾರಿಗೊಳಿಸಿದರು. ಈಗ ಶಾಲೆಗಳ ಅಭಿವೃದ್ಧಿಗೆ ತಾವೇ ಟೊಂಕಕಟ್ಟಿ ನಿಂತಿದ್ದಾರೆ. ಶಾಲೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವರೆ ಗುದ್ದಲಿ, ಪಿಕಾಸಿ ಹಿಡಿದಿದ್ದಾರೆ. ಬಾಂಡಲಿಯಲ್ಲಿ ಮಣ್ಣು ಹೊತ್ತು ಹಾಕಿ ಕೂಲಿ ಕಾರ್ಮಿಕನಂತೆ ಕೆಲಸ ಮಾಡಿದ್ದಾರೆ. ಸೊರಬ ತಾಲೂಕು ಹುರುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಮತ್ತು ಅಡುಗೆ ಮನೆ ನಿರ್ಮಾಣ ಕಾರ್ಯಕ್ಕೆ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿ ಶ್ರಮದಾನ ಮಾಡಿದ್ದಾರೆ. ಈ ಹಿಂದೆ ಸೊರಬದ ಕೆರೆ ಜೀರ್ಣೋದ್ಧಾರಕ್ಕೆ ಮಧು ಬಂಗಾರಪ್ಪ ಗುದ್ದಲಿ ಹಿಡಿದು ಇಡೀ ದಿನ ಕೆರೆ ಅಭಿವೃದ್ಧಿಯ ಕಾರ್ಯದಲ್ಲಿ ಜನರೊಂದಿಗೆ ಭಾಗಿಯಾಗಿದ್ದರು.
ಸಚಿವ ಡಿ, ಸುಧಾಕರ್ ಶ್ಲಾಘನೆ.
ಮಧು ಬಂಗಾರಪ್ಪರ ಶ್ರಮದಾನಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಸಾಥ್ ನೀಡಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಯ ಕಾಪೌಂಡ್ ಅಭಿವೃದ್ಧಿಗೆ ಶ್ರಮದಾನ ಮಾಡಲಾಗಿದೆ.ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯ ನರೇಗಾ ಅಡಿ ಮಾಡಲಾಗ್ತಿದೆ.ನರೇಗಾ ಅಡಿ ಶಾಲೆ ಕೆಲಸ ಮಾಡಿ ರಾಜ್ಯಕ್ಕೆ ಶಿಕ್ಷಣ ಸಚಿವರು ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ
ಈಗ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಕೈ ಜೋಡಿಸಿರುವ ಸಚಿವರ ಶ್ರಮದ ಕೆಲಸಕ್ಕೆ ಜನತೆ ಸಂತಸಗೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸಿನಿಂದ ಬಿಸಿಲಿನ ಬೇಗೆಯಲ್ಲೂ ಸಚಿವರೊಂದಿಗೆ ಶ್ರಮದಾನ ಮಾಡಿದ್ದಾರೆ.
SUMMARY | Sharavathi, a burning issue in the district, is gearing up to fulfil the long-standing demand of the flood victims for land rights.
KEYWORDS | Sharavathi, madhu bangarappa, demand,