ಶಿವಮೊಗ್ಗ ಸೇರಿ 3 ಜಿಲ್ಲೆಗಳಲ್ಲಿ ಇವತ್ತು ಇದೆ ಮಳೆ | ಹೇಗಿದೆ ವಾತಾವರಣ?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 27, 2025 ‌‌ ‌‌

ಶಿವಮೊಗ್ಗವೂ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಇವತ್ತು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿನ್ನೆ ದಿನ ಶಿವಮೊಗ್ಗದ ಕೆಲವೆಡೆ ಮಳೆಯಾಗಿದೆ. 

ಹೊಸನಗರ, ಶಿಕಾರಿಪುರ, ಸೊರಬ ಭಾಗದಲ್ಲಿ ನಿನ್ನೆದಿನ ಮಳೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ ಹುಂಚದಕಟ್ಟೆಯಲ್ಲಿ ಹೆಚ್ಚು ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ಡೈಲಿ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಇನ್ನೂ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಇವತ್ತು ಮತ್ತು ನಾಳೆ ಅಂದರೆ ಮಾರ್ಚ್‌ 28 ರವರೆಗೂ ಆಯ್ದ ಪ್ರದೇಶಗಳಲ್ಲಿ ಮಳೆಯಾಗುವ ಮನ್ಸೂಚನೆ ಇದೆ ಎನ್ನಲಾಗಿದೆ. 

Share This Article