SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 31, 2025
ಶಿವಮೊಗ್ಗ| ಕರ್ನಾಟಕ ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ನ ನೂತನ ಶಿವಮೊಗ್ಗ ಜಿಲ್ಲಾ ಘಟಕವೂ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಅಮೆಚೂರ್ ಅಸೋಸಿಯೇಷನ್‍ನ ಸಬ್ ಕಮಿಟಿ ಸದಸ್ಯರಾದ ಎಂ ಶ್ರೀಕಾಂತ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದರು.
ರಾಜ್ಯಸಮಿತಿಯ ಸೂಚನೆ ಮೇರೆಗೆ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ರಚಿಸಲಾಗಿದ್ದು, ಇದರ ಅಧ್ಯಕ್ಷರಾಗಿ ಬಿ.ಸಿ ಚಂದ್ರಶೇಖರ್, ಪ್ರಧಾನಕಾರ್ಯದರ್ಶಿಯಾಗಿ ಅನಿಲ್ ಕುಮಾರ್. ಖಜಾಂಚಿಯಾಗಿ ಸಿದ್ದಯ್ಯ ಎಸ್.ಎನ್. ಉಪಾಧ್ಯಕ್ಷರಾಗಿ ಕೆ.ಎಸ್ ಶಶಿ .ಎಂ .ವಿನಯ್, ಸಹಕಾರ್ಯದರ್ಶಿಗಳಾಗಿ ಲಕ್ಷ್ಮಿನಾರಾಯಣ ಡಿ.ಬಿ, ಮರುಳಸಿದ್ದಸ್ವಾಮಿ ಎಂ ಜಿ, ಸದಸ್ಯರಾಗಿ ರಮೇಶ್ ಡಿ., ಸಂಘಟನಾ ಕಾರ್ಯದರ್ಶಿಯಾಗಿ ಮೈಕಲ್ ಕಿರಣ್ ಅವರುಗಳನ್ನು ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ದೇಶಿ ಕ್ರೀಡೆ ಕಬಡ್ಡಿ ಯನ್ನು ಜಿಲ್ಲೆಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಬ್ಬಡಿ ಪಂದ್ಯಾವಳಿಗಳನ್ನು ಏರ್ಪಡಿಸುವುದು, ಅದಕ್ಕೆ ಪೂರಕವಾದ ತರಬೇತಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ತಂಡಗಳನ್ನು ಸಿದ್ದಪಡಿಸಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕಳುಹಿಸುವ ಉದ್ದೇಶ ಹೊಂದಲಾಗಿದೆ.
ಈಗಾಗಲೆ ಶಿವಮೊಗ್ಗದಲ್ಲಿ ಕಬಡ್ಡಿ ಆಟಕ್ಕೆ ಉತ್ತಮ ವಾತಾವರಣವಿದ್ದು, ನಾಲ್ಕು ಜನರು ರಾಷ್ಟ್ರಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡೆಯಿಂದ ಉದ್ಯೋಗವಕಾಶವೂ ಲಭಿಸಲಿದ್ದು, ಬ್ಯಾಂಕ್ ಮತ್ತಿತರ ಸರ್ಕಾರಿ ಸೇವೆಗಳಲ್ಲಿ ಕ್ರೀಡಾ ಮೀಸಲಾತಿಯಲ್ಲಿ ಉದ್ಯೋಗ ಸಿಗಲಿದೆ ಎಂದು ವಿವರಿಸಿದರು.
SUMMARY | The new Shivamogga district unit of Karnataka State Amateur Kabaddi Association has also come into existence
KEYWORDS | Shivamogga, Kabaddi Association, Karnataka State Amateur,