SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 6, 2025
ಶಿವಮೊಗ್ಗದಲ್ಲಿ ಈ ಮೊದಲೇ ನಿಕ್ಕಿಯಾದಂತೆ ಏಪ್ರಿಲ್ 19 ಮತ್ತು 20 ರಂದು ಮಲೆನಾಡು ತುಂಗಭದ್ರಾ ಜೋಡುಕೆರೆ ಕಂಬಳ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಲಾಗಿದ್ದು, ಗುದ್ದಲಿ ಪೂಜೆ ಸಮಾರಂಭವನ್ನು ಫೆಬ್ರವರಿ 10 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುದ್ದಲಿ ಪೂಜೆ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪರವರು ತಿಳಿಸಿದ್ದಾರೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ಮಾಚೇನಹಳ್ಳಿ ಸಮೀಪದ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಸುಮಾರು 16 ಎಕರೆ ಜಾಗದಲ್ಲಿ ಈ ಕಂಬಳ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಲು ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಲೆನಾಡು ತುಂಗಭದ್ರಾ ಜೋಡುಕೆರೆ ಕಂಬಳದ ಅಧ್ಯಕ್ಷರಾದ ಮಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ವರ್ಷದಲ್ಲಿ 25 ಬಾರಿ ಕಂಬಳವನ್ನು ನಡೆಸುತ್ತೇವೆ. ಈ ಬಾರಿಯ ಕೊನೆಯ ಕಂಬಳ ಶಿವಮೊಗ್ಗದ ಮಾಚೆನಹಳ್ಳಿಯಲ್ಲಿ ಏಪ್ರಿಲ್ ನಲ್ಲಿ 19, 20 ರಂದು ಹಮ್ಮಿಕೊಂಡಿದ್ದೇವೆ. ಫೆ 10 ರಂದು ಮದ್ಯಾಹ್ನ 3 ಗಂಟೆಗೆ ಗುದ್ದಲಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಕಂಬಳದಲ್ಲಿ ಭಾಗವಹಿಸಲಿವೆ 100 ಜೋಡಿ ಚಾಂಪಿಯನ್ ಕೋಣಗಳು
ಶಿವಮೊಗ್ಗದಲ್ಲಿ ಇದೇ ಮೊದಲ ಸಲ ಕಂಬಳ ನಡೆಯಲಿದ್ದು, ಒಟ್ಟು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಕಂಬಳದಲ್ಲಿ 100 ಜೋಡಿ ಚಾಂಪಿಯನ್ ಕೋಣಗಳು ಪಾಲ್ಗೊಳ್ಳಲಿವೆ. 2 ದಿನದಲ್ಲಿ 33 ಗಂಟೆಗಳ ಕಾಲ ನಡೆಯುವ ಈ ಕಂಬಳ ನಟ, ಸಂಗೀತ ನಿರ್ದೇಶಕ ಗುರುಕಿರಣ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ.ಮೋಹನ್ ಆಳ್ವ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
SUMMARY | The guddali puja ceremony for Malnad Tungabhadra Jodukere Kambala, to be held in Shivamogga on April 19 and 20, could not be held on February 10 at Tungabhadra junction in the city
KEYWORDS | guddali puja ceremony, Kambala, Shivamogga,