ಶಿವಮೊಗ್ಗದಲ್ಲೊಂದು ವಿಭಿನ್ನ ರೀತಿಯ ವಿವಾಹ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025

ಶಿವಮೊಗ್ಗದಲ್ಲಿ ನಡೆದ ವಿವಾಹವೊಂದರಲ್ಲಿ ವಧುವರರು ಸೇರಿದಂತೆ ಮದುವೆಗೆ ಆಗಮಿಸಿದ ಅತಿಥಿಗಳು ಸಹ ರಕ್ತದಾನ ಮಾಡಿ ಇತರರಿಗೆ ಮಾದರಿ ಯಾಗಿದ್ದಾರೆ

ಯಶ್ವಂತ್‌ ಹಾಗೂ ಗೀತಾ ಎಂಬುವವರ ವಿವಾಹವನ್ನು ಶಿವಮೊಗ್ಗದ ಗುಡ್ಡೇಕಲ್‌ ಬಾಲಸುಬ್ರಮಣ್ಯ ಕಲ್ಯಾಣಮಂದಿರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಧುವರರಿಬ್ಬರೂ ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕೆಂದು ನಿರ್ದರಿಸಿದ್ದು ಈ ಹಿನ್ನಲೆ ರಕ್ತದಾನನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೆ ಬಂದಿದ್ದ ಅತಿಥಿಗಳು ಸಹ ರಕ್ತದಾನದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾಗಿದ್ದಾರೆ.

Malenadu Today

ಕುವೆಂಪು ರಂಗಮಂದಿರದಲ್ಲಿ ಮೈ ಫ್ಯಾಮಿಲಿ ನಾಟಕ ಪ್ರದರ್ಶನ

ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಫೆ. 13 ರಂದು ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಮೈಸೂರು ರಂಗಾಯಣದ ಪ್ರಸ್ತುತಿಯ ಸತೀಶ್ ತಿಪಟೂರು ರಚನೆಯ ಗಣೇಶ್ ಹೆಗ್ಗೋಡು ವಿನ್ಯಾಸ ಮತ್ತು ನಿರ್ದೇಶನದ ಶ್ರವಣ್ ಹೆಗ್ಗೋಡು ಗೊಂಬೆಗಳ ಪರಿಕಲ್ಪನೆ ಮತ್ತು ವಿನ್ಯಾಸದ “ಮೈ ಫ್ಯಾಮಿಲಿ” ನಾಟಕವು ಪ್ರದರ್ಶನಗೊಳ್ಳಲಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿಯನ್ನು ಪ್ರೋತ್ಸಾಹಿಸುವಂತೆ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ಕೋರಿರುತ್ತಾರೆ. ಟಿಕೇಟ್ ದರ ಒಬ್ಬರಿಗೆ ರೂ. 30/- ಇದ್ದು, ಹನ್ನೆರಡು ವರ್ಷದೊಳಿಗಿನ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.

Malenadu Today

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

ತೀರ್ಥಹಳ್ಳಿ | ಸರ್ಕಾರ ತಮ್ಮಬೇಡಿಕೆಗಳನ್ನು ಈಡೇರಿಸುವವರೆಗೂ ಕೆಲಸಕ್ಕೆ ಹಿಂದಿರುಗುವುದಿಲ್ಲ ಎಂದು ಆಗ್ರಹಿಸಿ  ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವದಿ ಮುಷ್ಕರ ಹಮ್ಮಿಕೊಂಡರು.

ಈಹಿಂದೆ ಕಂದಾಯ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೀಘ್ರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು. ಆದರೆ, ಇಂದಿಗೂ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ. ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತ ಹೆಚ್ಚಿನ ಒತ್ತಡ ಉಂಟಾಗಿದೆ ಎಂದು ಅಧಿಕಾರಿಗಳು ದೂರಿದರು.

Malenadu Today

ಕಾರು ಬೈಕ್‌ ನಡುವೆ ಅಪಘಾತ | ಬೈಕ್‌ ಸವಾರನಿಗೆ ಗಂಬೀರ ಗಾಯ

ಶಿವಮೊಗ್ಗ|  ಗ್ರಾಮಾಂತರ ವ್ಯಾಪ್ತಿಯಲ್ಲಿ ಕಾರು ಮತ್ತು ಬೈಕ್‌ನಡುವೆ ಬೀಕರ ಅಪಘಾತ ಸಂಭವಿಸಿದೆ. ಈ ಹಿನ್ನಲೆ ಕಾರ್‌ನ ಮುಂಬಾಗ ಸಂಪೂರ್ಣ ನುಜುಗುಜ್ಜಾಗಿದ್ದು, ಬೈಕ್‌ ಸವಾರನಿಗೆ ಗಂಬೀರ ಗಾಯಗಳಾಗಿವೆ. ಈ ಹಿನ್ನಲೆ ತುರ್ತು ರಕ್ಷಣಾ ವಾಹನದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.

Malenadu Today

ಅನಿಲ್ ಕುಮಾರ್ ಬಿ.ಎನ್.ಅವರಿಗೆ ಪಿಎಚ್‌.ಡಿ

ಶಿವಮೊಗ್ಗ|  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದ ನಂಜುಂಡಪ್ಪ ಬಿ.ಎಂ ಮತ್ತು ಯಶೋಧಮ್ಮ ಪುತ್ರ ಅನಿಲ್ ಕುಮಾರ್ ಬಿ.ಎನ್.ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ.

ಮೆಕ್ಯಾನಿಕಲ್ ವಿಭಾಗ ಪ್ರಾಧ್ಯಾಪಕರಾದ ಡಾ.ಅಬ್ರಹಾರ್ ಅಹಮ್ಮದ್, ಡಾ.ರೆಡಪ್ಪ ಹೆಚ್.ಎನ್. ಮಾರ್ಗದರ್ಶನ ದಲ್ಲಿ ಉಷ್ಣ ಚಿಕಿತ್ಸೆಯಾದ Al-B₄C ಲೋಹ ಮಿಶ್ರಣ ಸಮಗ್ರಗಳ ಲಕ್ಷಣಾನುಶೀಲನೆ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾನ್ಯ ಮಾಡಿದೆ.

Malenadu Today

SUMMARY | At a wedding in Shivamogga, guests who attended the wedding, including the bride and groom, also donated blood and set an example for others

KEYWORDS | Shivamogga,donated blood,  wedding,

Share This Article