SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025
ಶಿವಮೊಗ್ಗದಲ್ಲಿ ಎಪಿಎಂಸಿ ಆವರಣದಲ್ಲಿ ಅಂಗಡಿಯೊಂದರ ಬಾಗಿಲಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಹಸಿರು ಹಾವನ್ನ ಶಿವಮೊಗ್ಗ ಉರಗ ಸಂರಕ್ಷಕ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಅಪರೂಪಕ್ಕೆ ಕಾಣಸಿಗುವ ಹಸಿರು ಹಾವು APMC ಆವರಣದಲ್ಲಿ ಕಂಡು ಬಂದಿತ್ತು. ಅದನ್ನ ನೋಡಿ ಹೆದರಿದ ಸ್ಥಳೀಯರು ಸ್ನೇಕ್ ಕಿರಣ್‌ಗೆ ಫೋನ್ ಮಾಡಿದ್ದರು. ವಿಷಯ ತಿಳಿದು ಬಂದ ಕಿರಣ್ ಹಾವನ್ನ ಸುರಕ್ಷಿತವಾಗಿ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ
ಇನ್ನೊಂದೆಡೆ ಶಿರಸಿಯ ಮತ್ತಿಘಟ್ಟಾದಲ್ಲಿ ಕಾಳಿಂಗ ಸರ್ಪ (King Cobra)ವೊಂದು ಕಾಣ ಸಿಕ್ಕಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿತ್ತು. ಇಲ್ಲಿನ ನಿವಾಸಿಯೊಬ್ಬರ ಮನೆಯ ಬಚ್ಚಲು ಮನೆಯಲ್ಲಿ ಕಾಳಿಂಗ ಕಾಣಿಸಿಕೊಂಡಿತ್ತು. ಬಚ್ಚಲು ಒಲೆಗೆ ಬೆಂಕಿ ಏಳಿಸಲು ಹೋದ ವೇಳೆ ಹಾವು ಬುಸುಗುಟ್ಟಿದ್ದನ್ನ ಗಮನಿಸಿದ ಮನೆಯವರು ಹೆದರಿ ಹೊರಬಂದಿದ್ದಾರೆ. ಆ ಬಳಿಕ ಶಿರಸಿಯ ಉರಗ ಸಂರಕ್ಷಕ ಮಾಝ್ ಸೈಯದ್ ಜಾನ್ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅವರು, ಹಾವನ್ನ ಸುರಕ್ಷಿತವಾಗಿ ಹಿಡಿದಿದ್ದಾರೆ.
SUMMARY | Conservation of green snake in Shivamogga, Kalinga snake in Sirsi
KEY WORDS | Conservation of green snake in Shivamogga, Kalinga snake in Sirsi