SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 15, 2025
ದೇಶದಾದ್ಯಂತ ಇಂದು ಹೋಳಿ ಹಬ್ಬವನ್ನು ಬಹಳಾ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅದೇ ರೀತಿ ಇಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿಯೂ ಸಹ ಕೂಡ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಹೋಳಿ ಹಬ್ಬವನ್ನ ಆಚರಿಸಲಾಯಿತು.
ಎಂದಿನಂತೆ ಈ ಬಾರಿಯೂ ಸಹ ಗೋಪಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬವನ್ನು ಅಯೋಜನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಯುವಕ ಯುವತಿಯರು ಮಾತ್ರವಲ್ಲದೆ ಎಲ್ಲಾ ವಯಸ್ಸಿನವರು ಸಹ ಈ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಹಾಕಿಕೊಂಡು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ರೈನ್ ಡ್ಯಾನ್ಸ್‌ನ್ನು ಸಹ ಆಯೋಜನೆ ಮಾಡಲಾಗಿತ್ತು. ಯುವಕ ಯುವತಿಯರು ಡಿಜೆಯ ಸದ್ದಿಗೆ ಆ ಉರಿ ಬಿಸಿಲಿನಲ್ಲಿಯೂ ಸಹ ಸಖತ್ ಸ್ಟೆಪ್ಸ್ ಹಾಕಿದರು. ಬೆಳಿಗ್ಗೆ 9 ರಿಂದ ಮದ್ಯಾಹ್ನ 12 ವರೆಗೆ ನಡೆದ ಈ ಹೋಳಿ ಹಬ್ಬ ಯಾವುದೇ ತೊಂದರೆ ಆಗದ ರೀತಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆಯಿತು.


SUMMARY | Holi was also celebrated with great enthusiasm and enthusiasm at Gopi Circle in Shivamogga.
KEYWORDS | Holi, Gopi Circle, Shivamogga,