SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024
ಶಿವಮೊಗ್ಗ| ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮವನ್ನು ನವಂಬರ್ 23 ರಂದು ನಡೆಸಲಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ತಿಳಿಸಿದರು
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿರುವ ಸಾಧಕರನ್ನು ಗುರುತಿಸಿ ಕಾಲೇಜಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಅತಿಥಿಗಳನ್ನಾಗಿ ಕರೆಸಲಾಗುತ್ತದೆ. ಹಾಗೆಯೇ ಇಲ್ಲಿ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈಗಾಗಲೇ 400ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ಸ್ವಯಿಚ್ಛೆಯಿಂದ ನೋಂದಾಯಿಸಿದ್ದಾರೆ. ಅವರಿಂದ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳೊಂದಿಗೆ ಹಾಗೂ ಪರಸ್ಪರ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವ ಸಂವಾದ ಕಾರ್ಯಕ್ರಮವನ್ನು ಸಹ ನಡೆಸಲಾಗುವುದು. ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಸವಿಯುವುದರ ಜೊತೆ ನಮಗೆ ವಿದ್ಯೆ ಕಲಿಸಿ ನಿವೃತ್ತರಾದ ಗುರುಗಳು ಮತ್ತು ಪ್ರಾಚಾರ್ಯರನ್ನು ಭೇಟಿ ಮಾಡುವುದು ಹಿರಿಯ ವಿದ್ಯಾರ್ಥಿಗಳ ಒತ್ತಾಸೆ ಆಗಿದೆ. ಆದ್ದರಿಂದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಶರತ್ ಅನಂತ್ ಮೂರ್ತಿ ಮಾಡಲಿದ್ದಾರೆ. ಹಾಗೆಯೇ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ರಾಜೇಶ್ವರಿ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ವಹಿಸಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ
SUMMARY | Rajeshwari, principal of the college, said, “We will be conducting a programme called Namma Sahyadri Namma Pride” on November 23 by the Senior Students’ Association.
KEY WORDS | Namma Sahyadri Namma hemme, sahyadri college, shivamogga,sahyadri college principal,