SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 13, 2024
ಶಿವಮೊಗ್ಗ| ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಸಹಕಾರ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಇದೇ ನವೆಂಬರ್ 14 ರಿಂದ 20 ರವರೆಗೆ ನಡೆಯಲಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ವಾಟಗೋಡು ಸುರೇಶ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಂದೊಂದು ದಿನದಂತೆ, ಒಟ್ಟು ಏಳು ದಿನಗಳ ಕಾಲ ಸಹಕಾರ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಡಾ. ಅರ್ ಎಂ ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ನಡೆಸಲಾಗುವುದು. ಮೊದಲ ದಿನ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ನೆರವೇರಿಸಲಿದ್ದಾರೆ. ಹಾಗೆಯೇ ಸಪ್ತಾಹ ಸಮರೋಪ ಸಮಾರಂಭವನ್ನು ಭದ್ರಾವತಿ ತಾಲೂಕಿನಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಯಾವ್ಯಾವ ತಾಲ್ಲೂಕಿನಲ್ಲಿ ಯಾವಾಗ ನಡೆಯಲಿದೆ ಸಪ್ತಾಹ ಕಾರ್ಯಕ್ರಮ
ಮೊದಲನೇ ದಿನ 14.11.2024 ರಂದು ರಂಗಮಂದಿರ ಸೊರಬದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಚಿವರಾದ ಮಧು ಬಂಗಾರಪ್ಪನವರು ಉದ್ಘಾಟನೆ ಮಾಡಲಿದ್ದಾರೆ.
ಎರಡನೇ ದಿನ 15.11.2024 ಶುಕ್ರವಾರ ಈಡಿಗರ ಸಭಾಭವನ ವರದಹಳ್ಳಿ ರಸ್ತೆ ಸಾಗರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಲಿದ್ದಾರೆ.
16.11.2024 ಶನಿವಾರದಂದು ಸಾಂಸ್ಕೃತಿಕ ಭವನ ಶಿಕಾರಿಪುರದ ದಲ್ಲಿ ನಡೆಯಲಿದ್ದು. ಈ ಕಾರ್ಯಕ್ರಮವನ್ನು ಶಾಸಕರಾದ ಬಿ ವೈ ವಿಜಯೇಂದ್ರ ಉದ್ಘಾಟಿಸಲಿದ್ದಾರೆ
17.11.2024 ಭಾನುವಾರ ಶಿವಮೊಗ್ಗ ಜಿಲ್ಲಾ ಸಾಗರ ಕೇಂದ್ರ ಬ್ಯಾಂಕ್ ನಿಗಮ ಬಾಲರಾಜ್ ರಸ್ತೆ ಶಿವಮೊಗ್ಗ ಇದರ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ.
18 11 2024 ಸೋಮವಾರ ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ನಿಗಮ ಇದರ ಸಭಾಂಗಣ ಎಪಿಎಂಸಿ ಯಾರ್ಡ್ ತೀರ್ಥಹಳ್ಳಿ ಎಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಸಕರಾದ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ.
19 11 2018 ಮಂಗಳವಾರ ಸಂತೆ ಮೈದಾನ ಬಟ್ಟೆ ಮಲ್ಲಪ್ಪ ಹೊಸನಗರ ತಾಲೂಕು ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಮಂಜುನಾಥಗೌಡರು ಉದ್ಘಾಟಿಸಲಿದ್ದಾರೆ.
20-11.2024 ಬುಧವಾರ ಶ್ರೀ ಪಾಂಡುರಂಗ ಕಲ್ಯಾಣ ಮಂದಿರ ತರೀಕೆರೆ ರಸ್ತೆ ಭದ್ರಾವತಿ ಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬಿ.ಕೆ ಸಂಗಮೇಶ್ ಶಾಸಕರು ಭದ್ರಾವತಿ ಉದ್ಘಾಟಿಸಿದ್ದಾರೆ.
ಈ ಬಾರಿಯ ವಿಶೇಷವಾಗಿ ಸಹಕಾರಿಗಳಿಗೆ ಕ್ರೀಡಾಕೂಟ ಮತ್ತು ಗೀತ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸಪ್ತಾಹದ ಮುಖ್ಯ ಧೈಯವಾದ “ ವಿಕಸಿತ ಭಾರತ ” ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ Theme:- ” Role of Cooperative in building “Viksit Bharat ” ಈ ವಿಷಯದ ಮೇಲೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
SUMMARY| Shimoga District Co-operative Union will be organising co-operative week from Nov. 14 to Nov. 20.
KEY WORDS. District Co-operative Union, Shivamogga,