SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 1, 2025
ಫೆಬ್ರವರಿ 1 ಮತ್ತು 2 ರಂದು ನಗರದ ಐಎಂಎ ಸಭಾಂಗಣದಲ್ಲಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ಭಾರತೀಯ ವೈದ್ಯಕೀಯ ಸಂಘ 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನಲೆ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮಲೆನಾಡು ನೇತ್ರ ತಜ್ಞರ ಸಂಘದ ಸಹಯೋಗದಲ್ಲಿ
ಕೃಷ್ಣಂ ಒಂದೇ ಜಗದ್ಗುರಂ ಎಂಬ ಮಕ್ಕಳ ಯಕ್ಷಗಾನ ಪ್ರದರ್ಶನ


ಕುವೆಂಪು ಕಲಾಮಂದಿರದಲ್ಲಿ ಯಕ್ಷಕುಟೀರದ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಕಡೆಕೊಪ್ಪಲ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಫೆಬ್ರವರಿ 2 ರ ಭಾನುವಾರ ಸಂಜೆ 5:30 ಕ್ಕೆ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದರು ಸಾಗರದ ಪುರಪ್ರೇಮನೆ ಗಣಪತಿ ಹೆಗಡೆ ಯವರ ನಿರ್ದೇಶನದಲ್ಲಿ ಕೃಷ್ಣಂ ವಂದೇ ಜಗದ್ಗುರುಮ್ ಎಂಬ ಕಥಾನಕದ ಪ್ರದರ್ಶನ ಮೂಡಿ ಬರಲಿದೆ. ಈ ಯಕ್ಷಗಾನ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರು ಲಂಬೋದರ ಹೆಗಡೆ ನಿಟ್ಟೂರು, ಮೃದಂಗದಲ್ಲಿ ಶರತ್ ‘ಜಾನಕ್ಕೆ ಹಾಗೂ ಚಂಡೆ ವಾದಕರಾದ ಭಾರ್ಗವ ನಿರ್ವಹಿಸಲಿದ್ದಾರೆ ಎಂದರು.
ಹೊಸ ಸದಸತ್ವ ಗೆ ಅರ್ಜಿ ಆಹ್ವಾನ
ಪ್ರವಾಸಿ ಕಾರಿನ ಚಾಲಕನ ಸಂಘದ ವತಿಯಿಂದ 2025 ನೇ ಸಾಲಿನ ಹೊಸ ಸದಸತ್ವ ನೀಡಲು ತೀರ್ಮಾನಿಸಿದ್ದು ಜನವರಿ 15 ರಿಂದ ಫೆಬ್ರವರಿ 15 ರವರೆಗೆ ಸದಸತ್ವ ನೀಡಲಾಗುವುದು, ಆಸಕ್ತರು ಅರ್ಜಿಯೊಂದಿಗೆ ಸಂಘದ ಕಾರ್ಯದರ್ಶಿ ಸಂಪರ್ಕಿಸುವಂತೆ ಸಂಬಂಧ ಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಸಂತಸ ತಂದಿದೆ – ಪ್ರಫುಲಚಂದ್ರ
ಕನ್ನಡ ಹೋರಾಟಗಾರರ ಮೇಲೆ ವಿವಿಧೆಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಆರ್ ಎಂಸಿ ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರಫುಲಚಂದ್ರ ಹೆಚ್ ಹರ್ಷ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳಲ್ಲಿ ಹಲವಾರು ಬಡ ಕೂಲಿ ಕಾರ್ಮಿಕರು, ಆಟೋ ಚಾಲಕರು, ರೈತರು ಸಾಹಿತಿಗಳು ಯುವ ಬರಹಗಾರರು ನಾಡು ನುಡಿ ನೆಲ ಭಾಷೆಗಳ ಹೋರಾಟದಲ್ಲಿ ಭಾಗಿಯಾಗಿದ್ದರು, ಅಂತವರ ಮೇಲಿನ ದುರುದ್ದೇಶದಿಂದ ಕೂಡಿದ ಹಾಕಲಾದ ಎಲ್ಲಾ ಕೇಸ್ ಗಳನ್ನು ಹಿಂತೆಗೆದುಕೊಂಡು ಅವರ ಹಿತ ಕಾಪಾಡಿದ್ದಕ್ಕೆ ಹಾಗೂ ಈ ನಿರ್ಧಾರ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಪರ ಹೋರಾಟಗಾರರ ಪರವಾಗಿ ಹಾಗೂ ಆಟೋ ಚಾಲಕರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಮಹಾಮಂಡಳಿ ನಿರ್ದೇಶಕರಾಗಿ 5 ಜನ ಆಯ್ಕೆ
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿ ನಿರ್ದೇಶಕರಾಗಿ ಸಹಕಾರ ರತ್ನ ಪುರಸ್ಕೃತ ಡಾ.ಬಿ.ಡಿ.ಭೂಕಾಂತ್ ಹಾಗೂ ಶ್ರೀದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಮುಖ್ಯ ಪ್ರವರ್ತಕ ಟಿ.ರಾಜೇಶ್ ಹಾಗೂ ಚಿತ್ರದುರ್ಗ ಜಗದೀಶ್ ಕಂದಿಕೆರೆ, ತುಮಕೂರಿನ ಮಲ್ಲಿಕಾರ್ಜುನಯ್ಯ ಆಯ್ಕೆ ಯಾಗಿದ್ದು, ಇವರಿಗೆ ಗೆಲುವಿಗೆ ಗಣ್ಯರು ಶುಭ ಆರೈಸಿದ್ದಾರೆ.
SUMMARY | A free eye check-up camp, blood pressure and diabetes check-up camp for auto drivers, taxi drivers and bus drivers will be held at ima auditorium in the city on February 1 and 2.
KEYWORDS | blood pressure, free eye check up, taxi drivers,