SHIVAMOGGA | MALENADUTODAY NEWS | ಮಲೆನಾಡು ಟುಡೆ Feb 14, 2025
ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ನಗರದ ಮೇಗ್ಗಾನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಮಹಿಳೆಯರಿಗೆ ಹಣ್ಣನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್ , ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ಆಶ್ರಯ ಸಮಿತಿ ಸದಸ್ಯರಾದ ಯಮನ ರಂಗೇಗೌಡರು, ಚೇತನ್, ಮಧುಸೂದನ್, ಅಬ್ದುಲ್ ಸತ್ತಾರ್, ಸಕ್ಲೇನ್, ವರುಣ್, ಗೌತಮ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು
ಸುದ್ದಿ 2 : ರೋಟರಿ ನಾಯಕತ್ವ ಪ್ರಶಸ್ತಿ ಪ್ರದಾನ ಫೆಬ್ರವರಿ 16ಕ್ಕೆ
ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಫೆ. 16ರಂದು ರೋಟರಿ ಅಕಾಡೆಮಿ ಫಾರ್ ಹೈಯರ್ ಲೀಡರ್‌ಶಿಪ್ ಅವಾರ್ಡ್ಸ್ ಕಾರ್ಯಕ್ರಮ(ರಹಲಾ) ಹಮ್ಮಿಕೊಳ್ಳಲಾಗಿದೆ. ನಾಯಕತ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ. 16ರಂದು ಬೆಳಗ್ಗೆ 9.30ಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಉದ್ಘಾಟಿಸುವರು. ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸುದ್ದಿ 3 : ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಚುನಾವಣೆ ಮುಂದೂಡಿಕೆ
ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಶಿವಮೊಗ್ಗದ ಚುನಾವಣೆ ಪ್ರಕಿಯೆಯನ್ನು ಕೇಂದ್ರ ಕಛೇರಿ ಯ ಆದೇಶ ಮೇರೆಗೆ ಮುಂದೂಡಲಾಗಿದೆ ಎಂದು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ 4 : ಫೆ 25 ರಂದು ಜಿಲ್ಲಾ ಜಂಗಮ ಸಮಾಜ ಸರ್ವಸದ್ಯಸರ ಸಭೆ
ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಫೆಬ್ರವರಿ 25 ರಂದು ಬೆಳಿಗ್ಗೆ 10:30 ಕ್ಕೆ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಸಮಾಜದ ಗೌರವಾಧ್ಯಕ್ಷ ಟಿ.ವಿ.ಈಶ್ವರಯ್ಯ ರವರ ಅಧ್ಯಕ್ಷತೆ ಹಾಗೂ ಕಾರ್ಯಾಧ್ಯಕ್ಷ ಎ.ಎಂ.ಚಂದ್ರಯ್ಯ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜದ ಸದಸ್ಯರು ಸಭೆಗೆ ಆಗಮಿಸಿ ಸಲಹೆ ಸಹಕಾರ ನೀಡಬೇಕು ಎಂದು ಸಮಾಜ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಹನಗೋಡಿ ಮಠ ಹಾಗೂ ಸಮಾಜದ ಮಾಧ್ಯಮ ಪ್ರಮುಖರಾದ ಹೆಚ್.ಎಂ.ಸಂಗಯ್ಯ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ 5 : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸು ಕೃತಜ್ಞತಾ ಸಭೆಗೆ ಆಹ್ವಾನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಡಾ. ಜೆ. ಕೆ. ರಮೇಶ್ ಅವರ ಸರ್ವಾಧ್ಯಕ್ಷತೆಯಲ್ಲಿ 19 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ದುಡಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಲು ಫೆಬ್ರವರಿ 15 ನೆಯ ಶನಿವಾರ ಸಂಜೆ 4:30 ಕ್ಕೆ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ಸಂಘಟನೆಗಳ ಜಿಲ್ಲಾ, ತಾಲ್ಲೂಕು, ಹೋಬಳಿ ಸಮಿತಿ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
SUMMARY | As part of the birthday celebrations of Women and Child Development Minister Lakshmi Hebbalkar, fruits were distributed to women at the Department of Obstetrics and Gynaecology at The Meggan Hospital in Shivamogga city.
KEYWORDS | birthday celebrations, Lakshmi Hebbalkar, NUSI, Meggan Hospital,