SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 29, 2025
ಶಿವಮೊಗ್ಗ | ಅಖಿಲ ಭಾರತ ವಿಧ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ್ಯದ 44 ನೇ ಪ್ರಾಂತ ಸಮ್ಮೇಳನವು ಜನವರಿ.31, ಫೆಬ್ರವರಿ 1 ಮತ್ತು 2 ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಪ್ರವೀಣ್ ಹೆಚ್.ಕೆ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಮ್ಮೇಳನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 10 ಸಂಘಟನಾತ್ಮಕ ವಿಭಾಗಗಳಿಂದ ಸುಮಾರು ಅಪೇಕ್ಷಿತ 1,300 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಲಿದ್ದಾರೆ.
ಜನವರಿ 31 ರಂದು ನಡೆಯುವ ಈ ಸಮ್ಮೇಳನಕ್ಕೆ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಹಾಗೂ ಪ್ರದರ್ಶಿನಿ ಉದ್ಘಾಟನೆಯ ಮೂಲಕ ಅಧಿಕೃತ ಚಾಲನೆ ನೀಡಲಾಗುವುದು.ಈ ಪ್ರದರ್ಶನಿ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಅಭಿನವ ಶಂಕರ ಮಹಾಸ್ವಾಮೀಜಿಗಳು ಕೂಡಲಿ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಕೂಡಲಿ ಶಿವಮೊಗ್ಗ ರವರು ವಹಿಸಲಿದ್ದಾರೆ ಎಂದರು
44ನೇ ಪ್ರಾಂತ ಸಮ್ಮೇಳನದ ಉದ್ಘಾಟನಾ ಸಮಾರಂಭ ಜನವರಿ 31ರ ಮಧ್ಯಾಹ್ನ 3:00 ಗಂಟೆಗೆ ಜರುಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಭೂಷಣ ಡಾ. ಬಿ ಎನ್ ಸುರೇಶ್, ಖ್ಯಾತ ವಿಜ್ಞಾನಿಗಳು ಹಾಗೂ ಕುಲಾಧಿಪತಿಗಳು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ ಪಿ.ವಿ ಕೃಷ್ಣ ಭಟ್, ವಿದ್ಯಾರ್ಥಿ ಪರಿಷತ್‌ನ ಪೂರ್ವ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ಪ್ರೊ.ರಾಜ್ ಶರಣ್ ಶಾಹಿ ರವರು ಭಾಗವಹಿಸಲಿದ್ದಾರೆ.
ಫೆ. 2 ರಂದು ಯುವ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ. ಆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಎನ್ ಸೇತುರಾಮ್, ಖ್ಯಾತ ನಟ ನಿರ್ದೇಶಕ ನಾಟಕಕಾರರು ಬೆಂಗಳೂರು ಇವರು ಭಾಗವಹಿಸಲಿದ್ದಾರೆ. ಈ ಸಾಲಿನ ಯುವ ಪುರಸ್ಕಾರ ಪ್ರಶಸ್ತಿಯನ್ನು ಸತೀಶ್ ಮೇತ್ರಿ ಸಾಮಾಜಿಕ ಸೇವಾ ಕ್ಷೇತ್ರ ಮೈಸೂರು ಇವರಿಗೆ ಪ್ರಧಾನ ಮಾಡಲಾಗುವುದು.
ಈ ಸಮ್ಮೇಳನದಲ್ಲಿ ನಂದೀಶ್ ಸಹ ಪ್ರಾಂತ ಪ್ರಚಾರಕರು ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಪಂಚ ಪರಿವರ್ತನೆ ಕುರಿತು, ಬಾಲಕೃಷ್ಣ ಎಸ್ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕ್ಯಾಂಪಸ್ ಕಾರ್ಯ ವಿಷಯದ ಕುರಿತು, ಡಾ. ಸತೀಶ್ ಎಚ್. ಕೆ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮೂರು ವಿಶೇಷ ಭಾಷಣಗಳು ಜರುಗಲಿವೆ ಎಂದರು.
SUMMARY | The 44th Regional Conference of The All India Vidyarthi Parishad of Karnataka Southern Region will be held on January 31, February 1 and 2 at Allamaprabhu Grounds in the city
KEYWORDS | abvp, Regional Conference, Allamaprabhu Grounds, shivamogga,