SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಶಿವಮೊಗ್ಗ ಪ್ರವಾಸದಲ್ಲಿರುವ ಸಚಿವ ಮಧು ಬಂಗಾರಪ್ಪ ನಟ ಶಿವಣ್ಣರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಆರೋಗ್ಯವಾಗಿದ್ದಾರೆ. ಮುಂದಿನ 10 ದಿನಗಳಲ್ಲಿ ಬೆಂಗಳೂರಿಗೆ ಆಗಮಿಸುತ್ತಾರೆ ಎಂದವರು ಮಾಹಿತಿ ನೀಡಿದರು. ತಂದೆ ತಾಯಿ ಹಾಗೂ ಅಭಿಮಾನಿ ದೇವರುಗಳ ಆಶೀರ್ವಾದದಿಂದ ಗುಣಮುಖರಾಗಿದ್ದಾರೆ, ಅವರು ಕ್ಷೇಮವಾಗಿದ್ದಾರೆ ಎಂದು ತಿಳಿಸಿದರು.
SUMMARY | Minister Madhu Bangarappa, who is on a tour of Shivamogga, has commented on the health of actor Shivanna.
ಮುಂದಿನ ಸುದ್ದಿ : OLX ನಲ್ಲಿ ಮಾರಿದ್ರು, ವಾಪಸ್ ಕದ್ದು ತಂದ್ರು
ಇನ್ನೊಂದು ಪ್ರಕರಣದಲ್ಲಿ ಅಪ್ಪ ಮಗ ಸೇರಿ ತಾವೇ ಮಾರಿದ ಬಸ್ಸನ್ನೇ ಪುನಃ ಕದ್ದು ಮನೆಗೆ ತಂದ ಘಟನೆ ಉಡುಪಿ ಜಿಲ್ಲೆಯಕ ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ನಡೆದಿದೆ. ಇಲ್ಲಿನ ತಂದೆ ಹಾಗೂ ಮಗ ಇಬ್ಬರು ತಮ್ಮ ಬಸ್ಸು ಮಾರಾಟಕ್ಕಿದೆ ಎಂದು ಓಎಲ್‌ಎಕ್ಸ್‌ನಲ್ಲಿ ಪ್ರಕಟಣೆ ಹಾಕಿದ್ದರು. ಅದನ್ನು ನೋಡಿ ತುಮಕೂರಿನ ಕೊರಟಗೆರೆ ನಿವಾಸಿ ಒಬ್ಬರು ಕಾಪುವಿಗೆ ಬಂದು 2017ನೇ ಮಾಡೆಲ್‌ನ ಬಸ್ಸನ್ನು ₹9.50 ಲಕ್ಷಕ್ಕೆ ಖರೀದಿಸಲು ವ್ಯಾಪಾರ ಕುದುರಿಸಿ, 2 ಲಕ್ಷ ನೀಡಿದ್ದರು. ಉಳಿದ ಹಣ 15 ದಿನದ ಒಳಗೆ ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ₹2.80 ಲಕ್ಷವನ್ನು ಫೋನ್ ಪೇ, ₹6.20 ಲಕ್ಷ ನಗದು ಸೇರಿ ಒಟ್ಟು ₹9 ಲಕ್ಷ ನೀಡಿ ಬಸ್ಸನ್ನು ತೆಗೆದುಕೊಂಡು ಹೋಗಿದ್ದರು. ಇದಾಗಿ ಕೆಲವು ದಿನಗಳಲ್ಲಿ ಆರೋಪಿಗಳು ತುಮಕೂರಿನಲ್ಲಿ ನಿಲ್ಲಿಸಿದ್ದ ಬಸ್ಸನ್ನು ಕಳುವು ಮಾಡಿ ತಮ್ಮೂರಿಗೆ ತಂದಿದ್ದಾರೆ. ಈ ಸಂಬಂಧ ಕಾಪು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
KEY WORDS |Minister Madhu Bangarappa, Madhu Bangarappa on the health of actor Shivanna