SHIVAMOGGA | MALENADUTODAY NEWS | ಮಲೆನಾಡು ಟುಡೆ Jan 7, 2025
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜೊತೆ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಶಿಕ್ಷಕರ ಸಧನದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಇಲಾಖೆ ನೀಡಿರುವ ಸಭಾ ನಡಾವಳಿಯ ವಿವರ ಹೀಗಿದೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ), ಬೆಂಗಳೂರು, ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸಮಿತಿಯ ಮುಂದೆ ಈ ಬೇಡಿಕೆಗಳನ್ನ ಮಂಡಿಸಿದ್ದಾರೆ.
2017 ರವರೆಗೆ ನೇಮಕವಾದ ಶಿಕ್ಷಕರನ್ನು1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ, ಉಲ್ಲೇಖ (1)ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮೀಕರಿಸುವುದು.
ಉಲ್ಲೇಖ (1)ರ 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತ: 1-7/8 ಕ್ಕೆ ನೇಮಕ ಹೊಂದಿದವರನ್ನು PST ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು.
ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016 ರ ಮುಂಚೆ ನೇಮಕಾತಿ ಹೊಂದಿದ ಹಾಗೂ B.Ed ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ನಿವೃತ್ತಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ತದನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು. ಈಗ ಹೊರಡಿಸಿರುವ ಅಧಿಸೂಚನೆ ಸಂಖ್ಯೆ: EP 121 LBP 2021 ದಿನಾಂಕ: 28-08-2024ರ ಕರಡು ನಿಯಮಗಳನ್ನು ಕೈಬಿಡಬೇಕು.
ಈ ಮುಂಚಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೇ 20-25 ವರ್ಷಗಳಿಂದ 6-8 ನೇ ತರಗತಿಗಳಿಗೆ GPT, TGT ಸಮಾನಾಂತರವಾಗಿ ದುಡಿಯುತ್ತಿರುವ ಸೇವಾನಿರತ ಪದವೀಧರ ಶಿಕ್ಷಕರ ಸೇವೆಯನ್ನು ಗೌರವಿಸಿ, ಸೂಪರ್ ನ್ಯೂಮರರಿ ಹುದ್ದೆಯೆಂದು ಪುನರ್ ಪದನಾಮೀಕರಣದ ನಂತರ ಒಂದು ವೇತನ ಬಡ್ತಿಯನ್ನು ನೀಡಬೇಕು.
ಇನ್ನೂ ಕಾನೂನು ಇಲಾಖೆ ಉಪಕಾರ್ಯದರ್ಶಿ ಹರೀಶ ಮಾತನಾಡಿ, ಪಿ.ಎಸ್.ಟಿ. ಶಿಕ್ಷಕರುಗಳಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಿ ಜಿ.ಪಿ.ಟಿ. ಶಿಕ್ಷಕರಾಗಿ ಬಡ್ತಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಜಿ.ಪಿ.ಟಿ. ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕವಾಗಲು ಈಗಾಗಲೇ ಇಲಾಖೆ ಅವಕಾಶ ನೀಡಲಾಗಿತ್ತು. ಸಂಘದ ಬೇಡಿಕೆಯಂತೆ ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಜಿಸಲು ಯಾವುದೇ ಸಕಾರಣ ಇರುವುದಿಲ್ಲ ಮತ್ತು ಸಂಘದ ಬೇಡಿಕೆಗಳು ಸಾಧುವಲ್ಲ ಎಂಬುದಾಗಿ ತಿಳಿಸಿದರು.
ಪಿಎಸ್‌ಟಿ ವೃಂದದ ಎಲ್ಲಾ ಪದವಿ ವಿದ್ಯಾರ್ಹತೆ ಇರುವ ಶಿಕ್ಷಕರಿಗೆ 01 ಹೆಚ್ಚುವರಿ ವೇತನ ಬಡ್ತಿ ನೀಡಿ ಸೇವಾನಿರತ ಪದವೀಧರ ಶಿಕ್ಷಕರು ಎಂದು ಪದನಾಮೀಕರಿಸುವ ಬಗ್ಗೆ, ಇದು ಕಾರ್ಯ ಸಾಧುವಲ್ಲದ ಕೋರಿಕೆಯಾಗಿದ್ದು ಮತ್ತು ಈಗಾಗಲೇ 2017 ರ ನಂತರದಲ್ಲಿ 03 ನೇಮಕಾತಿಗಳು ಸಹ ಪೂರ್ಣಗೊಂಡಿದ್ದ ಹೊಸ ಪದನಾಮೀಕರಿಸಿದ ವೃಂದವನ್ನು ಜಾರಿಗೊಳಿಸಿದಲ್ಲಿ ಮುಂದಿನ ಬಡ್ತಿಗಳಲ್ಲಿಯೂ ಗೊಂದಲ ಉಂಟಾಗುವ ಬಗ್ಗೆ ವಿವರಿಸಿದರು.
ಮುಂದುವರೆದು ಸರ್ಕಾರದ ಜಂಟಿ ಕಾರ್ಯದರ್ಶಿಗಳು ಮಾತನಾಡಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ, ನೀಡಲು ಸಾಧಕ ಭಾದಕಗಳನ್ನು ಪರಿಗಣಿಸಿ, ಇಲಾಖಾ ಅಭಿಪ್ರಾಯ ಪಡೆದು ಕ್ರಮವಹಿಸಬಹುದಾಗಿದೆ ಎಂದು ತಿಳಿಸಿದರು. ಹಾಗೂ ಮನವಿಗಳ ಬಗ್ಗೆ ಸಾಧುವಾಗುವುದನ್ನು ಪ್ರಸ್ತಾಪಿಸಿ ಹಾಗೂ ಮಾಹಿತಿ ವಿವರಗಳನ್ನು ಇತರ ರಾಜ್ಯಗಳಲ್ಲಿ ಇಂತಹ ಕ್ರಮಗಳಾಗಿದ್ದರೆ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಮುಖಾಂತರ ಆರ್ಥಿಕ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಅಭಿಪ್ರಾಯವನ್ನು ಪಡೆದು ನಂತರ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ನಂತರದಲ್ಲಿ, ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ಅಧ್ಯಕ್ಷರಾದ ಯಲ್ಲಪ್ಪ ಗೌಡ ಗೌರವ ಅಧ್ಯಕ್ಷ ಹಾಗೂ ಮುರಳೀಧರ್ ಅಧ್ಯಕ್ಷರು ಅವರುಗಳ ಬೇಡಿಕೆಯನ್ನು ಸಮಿತಿಯ ಮುಂದೆ ಪ್ರಸ್ತುತಪಡಿಸಿದರು.
2016 ರ ಪೂರ್ವದಲ್ಲಿ ನೇಮಕವಾದ ಶಿಕ್ಷಕರಿಗೆ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಿರುವುದನ್ನು ಯಥಾವತ್ತಾಗಿ ಮುಂದುವರೆಸಬೇಕು.
2016 ರ ಪೂರ್ವದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು (1-5) ರವರಿಗೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡುವ ಬದಲಾಗಿ ಘನ ನ್ಯಾಯಾಲಯದ ಆದೇಶದಂತೆ (6-8) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೇ.50%ನ್ನು ಪರಿಗಣಿಸಬೇಕು.
ವೃಂದ ಮತ್ತು ನೇಮಕಾತಿ ನಿಯಮಗಳು ದಿನಾಂಕ: 07.08.2017ರನ್ವಯ ಪಿ.ಎಸ್.ಟಿ ವೃಂದಕ್ಕಿಂತ ಜಿ.ಪಿ.ಟಿ ವೃಂದ ಹಿರಿಯ ವೃಂದವಾಗಿದ್ದು, ಪದವೀಧರ ಪ್ರಾಥಮಿಕ (6-8) ಶಿಕ್ಷಕರಿಗೆ ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳು ಹುದ್ದೆಗಳಿಗೆ ಬಡ್ತಿ ನೀಡಲು ಸಿ & ಆರ್ ತಿದ್ದುವಡಿ ಮಾಡಿ ಅವಕಾಶ ಕಲ್ಪಿಸಬೇಕು.
ಆರ್.ಟಿ.ಇ ಕಾಯ್ದೆ-2009 ಹಾಗೂ ಎನ್.ಸಿ.ಟಿ.ಇ ನಿಯಮಾವಳಿಗಳಂತೆ ರೂಪಿತವಾದ ಪಿ.ಎಸ್.ಟಿ ಹಾಗೂ ಜಿ.ಪಿ.ಟಿ ವೃಂದಗಳನ್ನು ವಿಲೀನಗೊಳಿಸಬಾರದು ಎಂಬ ಬೇಡಿಕೆಗಳನ್ನ ಮಂಡಿಸಿದರು
SUMMARY | A meeting was held with the Karnataka State Primary School Teachers’ Association under the leadership of the Education Department Commissioner regarding the demands of teachers in the Teachers’ Union.
KEY WORDS | meeting with the Karnataka State Primary School Teachers Association, Education Department Commissioner, Karnataka State Primary School Teachers demands , demands of teachers Teachers Union.