ಶರಾವತಿ ಸಂತ್ರಸ್ತರಿಗೆ ಮಹತ್ವದ ಅಪ್‌ಡೇಟ್‌ | ಈ ಸ್ಥಳಗಳಲ್ಲಿ ನಡೆಯಲಿದೆ ಜಂಟಿ ಸರ್ವೆ!?

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 4, 2025 ‌‌ ‌

ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಶರಾವತಿ ಸಂತ್ರಸ್ತರ ವಿಚಾರದಲ್ಲಿ ಶಿವಮೊಗ್ಗ ತಹಶೀಲ್ದಾರ್‌ ವಿಎಸ್‌ ರಾಜೀವ್‌ ಪ್ರಮುಖ ಅಪ್‌ಡೇಟ್‌ವೊಂದನ್ನು ನೀಡಿದ್ದು, ಶರಾವತಿ ಸಂತ್ರಸ್ತರು ಇರುವ ಜಾಗವನ್ನು ಜಂಟಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಅಗತ್ಯ ದಾಖಲೆ ಒದಗಿಸುವಂತೆ ಮನವಿ ಮಾಡಿದ್ದಾರೆ. 

ಏತಕ್ಕೆ ಈ ಸರ್ವೆ

ಶರಾವತಿ ಸಂತ್ರಸ್ತರ ಪುನರ್ವಸತಿಗಾಗಿ ಅರಣ್ಯ ಜಮೀನಿನಲ್ಲಿ ಈ ಹಿಂದೆ ಅವಕಾಶ ನೀಡಲಾಗಿತ್ತು.ಆದರೆ ಸಂತ್ರಸ್ತರಿಗೆ ಜಾಗದ ಹಕ್ಕು ಸಿಕ್ಕಿರಲಿಲ್ಲ. ಇದೀಗ ಅರಣ್ಯ ಜಮೀನು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ ಜಿಲ್ಲೆಯಲ್ಲಿ ಜಂಟಿ ತನಿಖೆ ಮತ್ತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಂಡ ಶರಾವತಿ ಸಂತ್ರಸ್ಥರಿರುವ ಸ್ಥಳಗಳಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಲಿದೆ. 

ಸಮೀಕ್ಷೆ ವೇಳೆ ಸಂತ್ರಸ್ತರು ತಮ್ಮ ಅನುಭೋಗದಲ್ಲಿರುವ ಜಾಗವನ್ನು ತೋರಿಸಿ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ತಹಶೀಲ್ದಾರ್‌ ಮನವಿ ಮಾಡಿದ್ದಾರೆ. ಈ ವೇಳೆ  ಅಧಿಕಾರಿಗಳು ಗಡಿ ಗುರುತು ಮಾಡಿ, ಸ್ಥಳದ ಅಳತೆಯನ್ನು ಮೋಜಣಿ ಮಾಡಿ ಅಂಕಿಅಂಶಗಳನ್ನು ಸಂಗ್ರಹಿಸಿಕೊಳ್ಳಲಿದ್ದಾರೆ. 

ಎಲ್ಲೆಲ್ಲಿ ನಡೆಯಲಿದೆ ಸರ್ವೇ!?

ಚೋರಡಿ ಸ.ನಂ 117, ಕೋಣೆಹೊಸೂರು 23, 22, ತುಪ್ಪೂರು 45, 44, 19, ಕುಂಸಿ 201, ಸಿಂಗನಹಳ್ಳಿ 61, ಕೊರಗಿ 30, ಶಾಂತಿಕೆರೆ 1, ವಡೇರಕೊಪ್ಪ 1, ಶೆಟ್ಟಿಕೆರೆ 1, ಮಂಜರಿಕೊಪ್ಪ 26, 27, 28, 37, 7, ಅನುಪಿನಕಟ್ಟೆ 127, ಹನುಮಂತಾಪುರ 6, ಸೂಡೂರು 16, ದೊಡ್ಡಮತ್ಲಿ 16, ಆಡಿನಕೊಟ್ಟಿಗೆ 17, ಕೂಡಿ 31, 32, 33, 34, ತಾವರೆಕೊಪ್ಪ 24, ಪುರದಾಳು 1, ಮಲೆಶಂಕರ ಎಸ್‌ಎಫ್ 1, ಶೆಟ್ಟಿಹಳ್ಳಿ 24, ಚಿತ್ರಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ. 1, 7, 8, 24, 8.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು