ಶರಣಾದ ನಕ್ಸಲ್‌ ಲತಾ ಮುಂಡಗಾರು & ಟೀಂ ಬಳಿ ಯಾವೆಲ್ಲಾ ವೆಪನ್ಸ್‌ಗಳಿದ್ದವು ಗೊತ್ತಾ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 11, 2025 ‌‌   ‌

ಈಗಾಗಲೇ ಸರ್ಕಾರದ ಮುಂದೆ ಶರಣಾಗಿರುವ ನಕ್ಸಲರ ವೆಪನ್‌ ಡಂಪ್ಸ್‌ ಎಲ್ಲಿದೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಪೊಲೀಸರು 

- Advertisement -

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ವ್ಯಾಪ್ತಿಗೊಳಪಡುವ ಕಿತ್ತಲೆಗುಳಿ ಬಳಿಯ ಅರಣ್ಯದಲ್ಲಿ ಆರು ಬಂದೂಕು ಮತ್ತು ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. 

ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ಎ.ಕೆ-56, ಮೂರು 303 ರೈಫಲ್, ಹನ್ನೆರಡು ಬೋರ್ ಎಸ್‌ಬಿಬಿಎಲ್ ಹಾಗೂ ಒಂದು ಸ್ವದೇಶ ನಿರ್ಮಿತ ಬಂದೂಕು ದೊರೆತಿದೆ. ಅಲ್ಲದೇ 7.62 ಎಂಎಂ ಎ.ಕೆ. ಮದ್ದು ಗುಂಡು-11, 303- ರೈಫಲ್ ಮದ್ದು ಗುಂಡು-133, ಎ.ಕೆ.-56 ಖಾಲಿ ಮ್ಯಾಗಿನ್-01, 12 ಬೋರ್ ಕಾರ್ಟೀಡ್ನಸ್-24. ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದು ಗುಂಡು-8 ಸೇರಿದಂತೆ ಒಟ್ಟು 176 ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂದ ಜಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

SUMMARY | Weapons of surrendered Naxalites found near Kittaleguli near Jayapura in Koppa taluk of Chikkamagaluru district

KEY WORDS |‌ Weapons of surrendered Naxalites found , Kittaleguli,  Jayapura in Koppa taluk , Chikkamagaluru district

Share This Article