SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 18, 2025
ಕಿಸ್ ಚಿತ್ರದ ಖ್ಯಾತಿಯ ವಿರಾಟ್ ಅಭಿನಯಿಸಿರುವ ಹಾಗೂ ತಾಂತ್ರಿಕ ಬ್ರಹ್ಮ ದಿನಕರ್ ತೂಗದೀಪ್ ನಿರ್ದೇಶನದ ರಾಯಲ್ ಚಿತ್ರದ ಟೀಸರ್ ಸರಿಗಮ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದೆ.
2 ನಿಮಿಷ 34 ಸೆಕೆಂಡ್ ಇರುವ ಈ ಟ್ರೈಲರ್‌ನಲ್ಲಿ ವಿರಾಟ್ ಹಣಗಳಿಸಲು ಏನೆಲ್ಲಾ ಮಾಡುತ್ತಾನೆ ಎಂಬುದರ ಸಿಕ್ವೆಲ್ಗಳನ್ನು ನೋಡಬಹುದು.
ಇದರ ನಡುವೆ ಬ್ಯುಸಿನೆಸ್ ಮ್ಯಾನ್ ಪಾತ್ರದಲ್ಲಿಯೂ ವಿರಾಟ್ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ವಿರಾಟ್ ಬ್ಯುಸಿನೆಸ್ ಮ್ಯಾನ್ ಆ ಅಥವಾ ಕಳ್ಳನ ಎಂಬ ಕುತೂಹಲವನ್ನು ಮೂಡಿಸಲಾಗಿದೆ.
ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದ್ದು, ಚಾಯಾ ಸಿಂಗ್ ವಿರಾಟ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ವಿರಾಟ್‌ಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ರಘು ಮುಖರ್ಜಿ ರಂಗಾಯಣ ರಘು ಸೇರಿದಂತೆ ಅನೇಕ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಟ್ರೈಲರ್ ನೋಡಿದಾಗ ಇದೊಂದು ಪಕ್ಕಾ ಫ್ಯಾಮಿಲಿ ಆಡಿಯನ್ಸ್ ನೋಡಬಹುದಾದಂತಹ ಸಿನಿಮಾ ಎಂದು ಹೇಳಬಹುದು. ವಿರಾಟ್‌ರ ಪಂಚಿಂಗ್ ಡೈಲಾಗ್ ಬ್ಯಾಗ್ರೌಂಡ್ ಮ್ಯೂಸಿಕ್ ಹಾಗೂ ಚಿತ್ರದ ಎಲ್ಲಾ ಪ್ರೇಮ್‌ಗಳು ಅತ್ಯುತ್ತಮ ರೀತಿಯಲ್ಲಿ ಮೂಡಿಬಂದಿದೆ.
ಇದು ವಿರಾಟ್ ಅಭಿನಯದ 2 ನೇ ಚಿತ್ರವಾಗಿದ್ದು, ಟ್ರೈಲರ್‌ನಲ್ಲಿ ವಿರಾಟ್ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಬೋಗೇಂದ್ರ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.ಈ ಚಿತ್ರ ಇದೇ ಜನವರಿ 24 ರಂದು ರಾಜ್ಯದಾಧ್ಯಂತ ಬಿಡುಗಡೆಯಾಗಲಿದೆ.
SUMMARY | The teaser of ‘Royal’, directed by Tantrik Brahma Dinakar Thoogadeep and starring Virat of ‘Kiss’ fame, has been released on Saregama’s YouTube channel.
KEYWORDS | Royal, Dinakar Thoogadeep, Virat, filmy news,