SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 17, 2025
ಸಾಗರದಿಂದ ತಾಳಗುಪ್ಪ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ 134 ಕಿ.ಮೀ:145/600-700 ಮತ್ತು ಸಾಗರ-ಸೊರಬ ಬೈಪಾಸ್ ರಸ್ತೆ ಸ್ಟೇಷನ್ ನಡುವೆ ಬರುವ ಎಲ್‌ಸಿ ನಂ 130 ಕಿ.ಮೀ 143/600-700 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಮಾರ್ಚ್ 17 ರಿಂದ 18 ಮತ್ತು ಮಾರ್ಚ್ 20 ರಿಂದ 21 ರ ವರೆಗೆ ಗೇಟ್ ಮುಚ್ಚಿ ಈ ಕೆಳಗಿನಂತೆ ಪರ್ಯಾಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಆದೇಶಿಸಿದ್ದಾರೆ.
134 ಎಲ್‌ಸಿ ನಂ-145/600-700 ಸಾಗರ-ತಾಳಗುಪ್ಪಮಾರ್ಚ್ 17 ರಿಂದ 18 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಎಲ್‌ಸಿ 132 ಸಾಗರ ಟೌನ್ ಶಿರವಾಳದಿಂದ-ಅಣಲೆಕೊಪ್ಪ ಇಲ್ಲಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
130 ಎಲ್‌ಸಿ ನಂ-143/600-700 ಸಾಗರ-ಆನಂದಪುರ ಮಾರ್ಚ್ 20 ರಿಂದ 21 ರ ವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಎಲ್‌ಸಿ 129 ಸಾಗರ ಟೌನ್ ಇಂಡಸ್ಟ್ರಿಯಲ್ ಏರಿಯಾ ಬೈಪಾಸ್ ರಸ್ತೆ ಮತ್ತು ಎಲ್‌ಸಿ 132 ಸಾಗರ ಟೌನ್ ಅಣಲೆಕೊಪ್ಪ ಈ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದಾಗಿದೆ.
ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ಕಲಂ 115 ರನ್ವಯ ತಾತ್ಕಾಲಿಕವಾಗಿ ಮೇಲ್ಕಂಡ ದಿನಾಂಕಗಳಲ್ಲಿ ಮಾತ್ರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.
SUMMARY | Deputy Commissioner Gurudatta Hegde has ordered the closure of the gate and providing an alternative route as follows
KEYWORDS | Deputy Commissioner, Gurudatta Hegde, alternative route, railway crossing,