SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 14, 2025
ಶಿವಮೊಗ್ಗ | ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ಶಿವಮೊಗ್ಗ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘ , ಶಿವಮೊಗ್ಗ ಜಿಲ್ಲಾ ಮೊಗವೀರ ಮಹಾಜನ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ ಮಾರ್ಚ್ 23 ರಂದು ಬೆಳಿಗ್ಗೆ 10: 30 ಕ್ಕೆ ನಗರದ ಮಾಧವ ಮಂಗಲ ಸಭಾಭವನದಲ್ಲಿ ನಡೆಯಲಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ ಹಾಲೇಶಪ್ಪ ತಿಳಿಸಿದರು.
ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯಾದ್ಯಂತ ನೆಲೆಸಿರುವ ಗಂಗಾಮತ, ಬೆಸ್ತ, ಮೊಗವೀರ, ಸುಣಗಾರ, ಕೋಲಿ, ಕಬ್ಬಲಿಗ, ಜಾಲಗಾರ, ಬಾರ್ಕಿ ಇತರೆ ಪರ್ಯಾಯ ಹೆಸರುಗಳಿಂದ ಕರೆಯಲ್ಪಡುವ ಉಪಜಾತಿಗಳ ಅನುಕೂಲಕ್ಕಾಗಿ ರಾಜ್ಯಮಟ್ಟದ ವಧು-ವರರ ಸಮಾವೇಶ ನಡೆಯಬೇಕೆಂಬುದು ಬಹುಜನರ ಮತ್ತು ಬಹುದಿನದ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಮೇಲ್ಕಂಡ ಸಂಘಗಳು ಈ ಸಮಾವೇಶವನ್ನು ಆಯೋಜಿಸಿವೆ. ಸಮಾವೇಶದಲ್ಲಿ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಸೂಕ್ತ ವಧು-ವರರನ್ನು ಆಯ್ಕೆ ಮಾಡಿಕೊಳ್ಳುವ ಈ ಸದಾವಕಾಶದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ
ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ತಮ್ಮ ಇತ್ತೀಚಿನ 2 (4×6) ಪೋಸ್ಟ್ ಕಾರ್ಡ್ ಅಳತೆಯ ಪೂರ್ಣ ಭಾವಚಿತ್ರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ನಮ್ಮ ಕಚೇರಿ ಶಿವಮೊಗ್ಗ ಜಿಲ್ಲಾ ಗಂಗಾಮತ ವಿಧ್ಯಾರ್ಥಿ ನಿಲಯದಲ್ಲಿ ಮಾರ್ಚ್ 15 ರ ಒಳಗಾಗಿ ತಲುಪಿಸಬೇಕು. ಈ ಅರ್ಜಿಗೆ ಹೆಸರು ನೋಂದಾಯಿಸುವರು 1000 ರೂಪಾಯಿ ಪಾವತಿಸಬೇಕು ಎಂದರು.
SUMMARY | vadhu vara samaveshain samavesha
KEYWORDS | vadhu vara samaveshain samavesha